ರಾಣೇಬೆನ್ನೂರು : ಮಾರ್ಕಂಡೇಯ ಮಹರ್ಷಿಗಳ ಜಯಂತಿ, ತೊಟ್ಟಿಲೋತ್ಸವ

ರಾಣೇಬೆನ್ನೂರು : ಮಾರ್ಕಂಡೇಯ ಮಹರ್ಷಿಗಳ ಜಯಂತಿ, ತೊಟ್ಟಿಲೋತ್ಸವ

ರಾಣೇಬೆನ್ನೂರು, ಫೆ.20- ಇಲ್ಲಿನ ಶ್ರೀ ಸಿದ್ದೇಶ್ವರ ನಗರದಲ್ಲಿರುವ ಶ್ರೀ ಗುರು ಮಾರ್ಕಂಡೇಶ್ವರ ದೇವಸ್ಥಾನದಲ್ಲಿ ನಿನ್ನೆ ಶ್ರೀ ಗುರು ಮಾರ್ಕಂಡೇಶ್ವರ ಮಹರ್ಷಿಗಳ ಅಭಿಷೇಕ, ಪೂಜಾ ಕಾರ್ಯಕ್ರಮಗಳು ಪದ್ಮಶಾಲಿ ಸಮಾಜದ ಪೀಠಾಧ್ಯಕ್ಷರಾದ ಶ್ರೀ ಮಾರ್ಕಂಡೇಶ್ವರ ಪದ್ಮಶಾಲಿ ಗುರು ಮಠ ಮಹಾಸಂಸ್ಥಾನ ತುಮ್ಮಿನಕಟ್ಟಿಯ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಜರುಗಿದವು.

ಸುಮಂಗಲಿಯರು ಗಂಗಾಮಾತೆ ಪೂಜೆಯನ್ನು ನೆರವೇರಿಸಿ, ಜಲ ಕುಂಭವನ್ನು ಮೆರವಣಿಗೆಯಿಂದ ತೆಗೆದುಕೊಂಡು ಬಂದ ನಂತರ ಶ್ರೀ ಮಾರ್ಕಂಡೇಶ್ವರ ಸ್ವಾಮಿ ಹಾಗೂ ಶ್ರೀ ಕ್ಷೇತ್ರದ ಎಲ್ಲಾ ದೇವಾನು ದೇವತೆಗಳ ಅಭಿಷೇಕ ಹಾಗೂ ಪೂಜೆ ಅಲಂಕಾರಗಳು ನಡೆದವು. 

ಸುಮಂಗಲಿಯವರಿಗೆ ಅರಿಶಿಣ ಕುಂಕುಮ ಮಂಗಳ ದ್ರವ್ಯಗಳಿಂದ ಉಡಿ ತುಂಬುವ ಗೌರವಾರ್ಪಣೆಯನ್ನು ನಡೆಸಲಾಯಿತು. ಶ್ರೀ ಮಾರ್ಕಂಡೇಶ್ವರ ಸ್ವಾಮಿ ತೊಟ್ಟಿಲೋತ್ಸವವನ್ನು ಹಾಡುಗಳ ಮುಖಾಂತರ ನಾಮಕರಣ ನೆರವೇರಿಸಲಾಯಿತು. 

ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ನಾಗರಾಜ ಅ. ಅಗಡಿ, ಉಪಾಧ್ಯಕ್ಷ ಹನುಮಂತಪ್ಪ ಟಿ. ಮುಕ್ತೇನಹಳ್ಳಿ,  ಲಕ್ಷ್ಮಣ ಕಡ್ಲಿಬಾಳ, ಪರಶುರಾಮ ಅಗಡಿ, ನಾಗರಾಜ ದೇವರಡ್ದಿ, ಕೆ. ಕೆ. ಹಳ್ಳಳ್ಳಿ , ಶಂಕ್ರಣ್ಣ ಗರಡಿಮನಿ, ರೇವಣಪ್ಪ ಗುತ್ತೂರು, ಪ್ರವೀಣ ಗುತ್ತೂರು, ಮಾರುತಿ ಗರಡಿಮನಿ, ಬಸವರಾಜ ಐರಣಿ, ರವಿ ಕಿಚಡಿ, ಕರಿಬಸಪ್ಪ ಕಡ್ಲಿಬಾಳ, ಮಲ್ಲಿಕಾರ್ಜುನ ಮಾಗೇನಹಳ್ಳಿ, ಗಣೇಶ ಹುಲ್ಲತ್ತಿ, ಗದುಗೆಪ್ಪ ವಾಸನ, ಎಲ್ಲಪ್ಪ ಗುತ್ತಲ, ತಿಪ್ಪೇಶ ಅಗಡಿ ರಾಮಣ್ಣ   ಗುತ್ತಲ ನಾಗರಾಜ ಕಾಸಲ, ವೆಂಕಟೇಶ ಪೆನಗೊಂಡಲ,  ಚನ್ನಬಸಮ್ಮ ಕಾಮಣ್ಣನವರ, ದ್ರಾಕ್ಷಾಯಣಿ ಮುಕ್ತೇನಹಳ್ಳಿ, ಕವಿತಾ ಶೆಟ್ಟಿ, ಶಶಿಕಲಾ ಬಂಡೇಕಲ್, ಪ್ರೇಮಾ ಶೆಟ್ಟಿ, ರುದ್ರಮ್ಮ  ಮತ್ತಿತರರು ಉಪಸ್ಥಿತರಿದ್ದರು.

error: Content is protected !!