ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಆಂಜನೇಯ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣೆ

ಎಸ್.ಎಸ್. ಕೇರ್ ಟ್ರಸ್ಟ್‌ನಿಂದ ಆಂಜನೇಯ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣೆ

ದಾವಣಗೆರೆ, ಫೆ. 20- ನಗರದಲ್ಲಿ ಆಯೋಜಿಸಲಾಗಿರುವ ಸಂಚಾರಿ ಆರೋಗ್ಯ ಶಿಬಿರಗಳಲ್ಲಿ ಪ್ರಥಮ ಬಾರಿಗೆ ಬಿ.ಪಿ. ಪರೀಕ್ಷೆಗೊಳಗಾದ 100 ಜನರಲ್ಲಿ 30 ಜನರಿಗೆ ಬಿ.ಪಿ. ಅಧಿಕವಾಗಿರುವುದು ಕಂಡು ಬಂದಿದೆ. ನಗರ ಪ್ರದೇಶದಲ್ಲಿಯೇ ಈ ಪರಿಸ್ಥಿತಿಯಾದರೆ, ಗ್ರಾಮೀಣ ಪ್ರದೇಶದ ಪರಿಸ್ಥಿತಿ ಹೇಗಿರಬಹುದು ಎಂದು ಎಸ್.ಎಸ್. ಕೇರ್ ಟ್ರಸ್ಟ್‌ನ ಆಜೀವ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ವಿಷಾದ ವ್ಯಕ್ತಪಡಿಸಿದರು.

ಅವರು ಇಲ್ಲಿನ ಆಂಜನೇಯ ಬಡಾ ವಣೆಯ ಬಸವೇಶ್ವರ ಉದ್ಯಾನವನದ ಲೈಬ್ರರಿಯಲ್ಲಿ ಸಂಚಾರಿ ಆರೋಗ್ಯ ವಾಹ ನದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಶಿಬಿರಕ್ಕೆ ಭೇಟಿ ನೀಡಿ ಮಾತನಾಡುತ್ತಿದ್ದರು.

ಈ ಶಿಬಿರಗಳಿಂದ 30 ವರ್ಷಗಳ ನಂತರ ಪ್ರತಿಯೊಬ್ಬರೂ ಬಿ.ಪಿ., ಸಕ್ಕರೆ ಕಾಯಿಲೆ ಪರೀಕ್ಷೆ ಮಾಡಿಸಿಕೊಳ್ಳಬೇಕು ಹಾಗೂ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಬೇಕು ಎಂಬ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಪ್ರಭಾ ತಿಳಿಸಿದರು. 

ಈ ಸಂದರ್ಭದಲ್ಲಿ ಸುಮಾರು 194 ಜನರಿಗೆ ಜ.ಜ.ಮು. ವೈದ್ಯಕೀಯ ವಿದ್ಯಾಲಯದ ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ ಹಾಗೂ ಸಮಾಲೋಚನೆ ನಡೆಸಲಾಯಿತು.

ರಕ್ತದ ಸಕ್ಕರೆ ತಪಾಸಣೆ,  ಬಿ.ಪಿ ತಪಾಸಣೆ, ಇ.ಸಿ.ಜಿ ಪರೀಕ್ಷೆ, ನೇತ್ರ ತಪಾಸಣೆ, ಹೃದಯ ತಪಾಸಣೆ ಹಾಗು ನುರಿತ ವೈದ್ಯರಿಂದ ಸಂಪೂರ್ಣ ಆರೋಗ್ಯ ತಪಾಸಣೆ, ಉಚಿತ ಔಷಧಿಯೊಂದಿಗೆ  ಹೆಚ್ಚಿನ ಚಿಕಿತ್ಸೆಗಾಗಿ ಉಚಿತ ಎಸ್ಎಸ್ ಕೇರ್ ಟ್ರಸ್ಟ್ ಕಾರ್ಡ್ ವಿತರಿಸಲಾಯಿತು. ಬಾಪೂಜಿಯ ಮೋದಿ ಆಸ್ಪತ್ರೆಯಲ್ಲಿ ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಕಾರ್ಡ್ ನೀಡಲಾಯಿತು.

error: Content is protected !!