ಹಾಸ್ಯದ ರಸದೌತಣ ಉಣಿಸಿದ ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ

ಹಾಸ್ಯದ ರಸದೌತಣ ಉಣಿಸಿದ  ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ

ಕೊಟ್ಟೂರು, ಫೆ. 20 – ಕೊಟ್ಟೂರಿನಲ್ಲಿ ಸುಮಾರು ಎರಡು ದಶಕಗಳಿಂದ ಸಂಗೀತ ಹಾಗೂ ರಸಮಂಜರಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ಕೆ.ಎಂ. ಚಂದ್ರಶೇಖರ್, ಗೌರಿಹಳ್ಳಿ ಮಂಜು ನಾಥ್ ಇವರ ಸುದ್ದಿ ಮಿತ್ರ ಸಾಂಸ್ಕೃತಿಕ ವೇದಿಕೆ ಸಂಸ್ಥೆ ಇವರಿಂದ `ಹಾಸ್ಯ ಸಂಭ್ರಮ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ತಿಪ್ಪೇಸ್ವಾಮಿ ವೆಂಕಟೇಶ್ ಅವರು ನೆರವೇರಿಸಿ ಮಾತನಾಡಿ, ಈ 21ನೇ ಶತಮಾನದ ಮುಂದಿನ 20 ಶತಮಾನಗಳ ಕಂಪ್ಯೂಟರ್ ಜಗತ್ತು  ಆಳುತ್ತದೆ. ಇಂದಿನ ದಿನಗಳಲ್ಲಿ ಹಾಸ್ಯ ಸಂಭ್ರಮ ಉಳಿದಿರುವುದು ಕಲಾಭಿಮಾನಿ, ಕಲಾ ಪೋತ್ಸಾಹಕರಿಂದ ಹಾಸ್ಯ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ಮೂಡಿಸಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಎಸ್ಎಸ್ ಮುಖಂಡ ಬದ್ದಿ ಮರಿಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ವೆಂಕಟೇಶ್ ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ  ಜಿ.ಎಂ. ಮಲ್ಲಿಕಾರ್ಜುನ್, ಬದ್ದಿ ಮರಿಸ್ವಾಮಿ, ಅಡಕಿ ಮಂಜುನಾಥ್, ಕೆ ಕೊಟ್ರೇಶ್, ಬದ್ದಿ ಮಂಜುನಾಥ್, ಪ್ರದೀಪ್ ಕುಮಾರ್, ತೆಗ್ಗಿನಕೇರಿ ಹನುಮಂತಪ್ಪ ವಕೀಲರು, ಎಬಿಎಂ ಪ್ರವೀಣ್, ಯು.ಎಂ.ಎ. ರೇವಣ ಸಿದ್ದಯ್ಯ, ಕಬ್ಬಳ್ಳಿ ಪರಸಪ್ಪ, ಸಾತ್ವಾಡಿ ಕೊಟ್ರೇಶ್ ಬತ್ತನ ಹಳ್ಳಿ, ಸಿಪಿಎಂಎಲ್ ಕಮ್ಯುನಿಸ್ಟ್ ಪಾರ್ಟಿ ತಾಲ್ಲೂಕು ಕಾರ್ಯದರ್ಶಿ ಜಿ. ಮಲ್ಲಿಕಾರ್ಜುನ್, ಪತ್ರ ಬರಹಗಾರರು ಪಂಚಾಕ್ಷರಿ, ಬಿಡಿಸಿಸಿ ಬ್ಯಾಂಕ್ ಅಂಬಳಿ ಕೊಟ್ರೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರು ಗುರುಮೂರ್ತಿ, ಅಂಗಡಿ ಪ್ರಕಾಶ್ ಮತ್ತಿಹಳ್ಳಿ, ಮರಳು ಸಿದ್ದಯ್ಯ, ಇನ್ನೂ ಅನೇಕ ಪ್ರಮುಖ ಮುಖಂಡ ರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನುರಿತ ಹಾಸ್ಯ ಕಲಾವಿದರಾದ ಗಂಗಾವತಿ ನರಸಿಂಹ ಜೋಶಿ, ಜೀವನ ಸಾಬ್, ಗವಿ ಸಿದ್ದಯ್ಯ ಹಳ್ಳಿಕೇರಿ ಮಠ, ಕನ್ನಡದ ಕಣ್ಮಣಿ ಅನುಷಾ ಕೆ  ಹಿರೇಮಠ್, ಈ ಕಾರ್ಯಕ್ರಮಕ್ಕೆ ಆಗಮಿಸಿ ಕಲಾತಂಡ ದವರು ಕೊಟ್ಟೂರಿನ ಜನರಿಗೆ ಹಾಸ್ಯ ಚಟಾಕಿ ಸಿಡಿಸಿದರು. ನಿರೂಪಣೆಯನ್ನು ಗುರುಪ್ರಸಾದ್ ಜೆಎಂ ನೆರವೇರಿಸಿದರು.

error: Content is protected !!