ಹರಪನಹಳ್ಳಿ, ಫೆ.20- ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಕೊಟ್ಟೂರು ತಾಲ್ಲೂಕುಗಳನ್ನು ಒಳಗೊಂಡ ಹರಪನಹಳ್ಳಿ ಕಂದಾಯ ಉಪವಿಭಾಗಧಿಕಾರಿಯಾಗಿ ಚಿದಾನಂದ ಗುರುಸ್ವಾಮಿ ಅವರನ್ನು ಸರ್ಕಾರ ವರ್ಗಾವಣೆಗೊಳಿಸಿ ಆದೇಶಿಸಿದೆ. ಇಲ್ಲಿಯವರೆಗೂ ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಇವರು ಮೂಲತಃ ಬೆಳಗಾವಿ ಜಿಲ್ಲಾ ಅಥಣಿ ತಾಲ್ಲೂಕಿನವರು. ಹರಪನಹಳ್ಳಿ ಎಸಿಯಾಗಿ ಈವರೆಗೂ ಸೇವೆ ಸಲ್ಲಿಸುತ್ತಿದ್ದ ಟಿ.ವಿ.ಪ್ರಕಾಶ್ ಅವರನ್ನು ಹಿರಿಯೂರು ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನ ಅಧಿಕಾರಿಯಾಗಿ ವರ್ಗಾಯಿಸಲಾಗಿದೆ
ಚಿದಾನಂದ ಗುರುಸ್ವಾಮಿ ಹರಪನಹಳ್ಳಿ ಉಪವಿಭಾಗಾಧಿಕಾರಿ
