ಕವಿ ಸರ್ವಜ್ಞರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ

ಕವಿ ಸರ್ವಜ್ಞರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ

ಸರ್ವಜ್ಞರ ಜಯಂತ್ಯೋತ್ಸವದಲ್ಲಿ ಹೊನ್ನಾಳಿ ತಹಶೀಲ್ದಾರ್ ಪಟ್ಟರಾಜಗೌಡ

ಹೊನ್ನಾಳಿ, ಫೆ. 20- ತ್ರಿಕಾಲ ಜ್ಞಾನಿ ಸರ್ವಜ್ಞರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನಗಳು, ಆವಿಷ್ಕಾರಗಳು ಆಗಬೇಕಾಗಿದೆ ಎಂದು ತಹಶೀಲ್ದಾರ್ ಪಟ್ಟರಾಜಗೌಡ ಅವರು ಹೇಳಿದರು.

ತಾಲ್ಲೂಕು ಆಡಳಿತ ಹಮ್ಮಿಕೊಂಡಿದ್ದ ಸರ್ವಜ್ಞರ ಜಯಂತಿ ಸಮಾರಂಭದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಸರ್ವಜ್ಞ ಅವರು ಭೂತಕಾಲ, ವರ್ತಮಾನ ಕಾಲ ಹಾಗೂ ಭವಿಷ್ಯತ್ ಕಾಲದ ಬಗ್ಗೆ ಹೇಳಿದ್ದು, ಬಹುತೇಕ ಅವೆಲ್ಲವೂ ಸತ್ಯಕ್ಕೆ ಹತ್ತಿರವಾಗಿವೆ. ಈ ಸಮಾಜಕ್ಕೆ ಅವರು ಕೊಟ್ಟ ಸಾಹಿತ್ಯ ವಿಶಿಷ್ಟವಾಗಿದೆ. 

ಆದ್ದರಿಂದ ಅವರ ಬಗ್ಗೆ ಇನ್ನೂ ತಿಳಿದುಕೊಳ್ಳುವಷ್ಟು ವಿಷಯಗಳು ಸಾಕಷ್ಟಿವೆ. ಆದ್ದರಿಂದ ಅವರು ಯಾವ ಜಾತಿ, ಸಮುದಾಯ ಎಂಬುದು ಇಲ್ಲಿ ಮುಖ್ಯವಲ್ಲ. ಅವರು ಈ ಸಮಾಜದ ಆಸ್ತಿ. ಆದ್ದರಿಂದ ಅವರ ಕುರಿತ ಇನ್ನೂ ಹೆಚ್ಚಿನ ಅಧ್ಯಯನ ಅಗತ್ಯ ಎಂದರು.

ತಾಲ್ಲೂಕು ಕುಂಬಾರ ಸಮಾಜದ ಅಧ್ಯಕ್ಷ ಬಸವರಾಜಪ್ಪ ಸಾಸ್ವೆಹಳ್ಳಿ ಮಾತನಾಡಿ, ಕುಂಬಾರ ಸಮಾಜ ಹಿಂದುಳಿದಿದ್ದು, ಎಲ್ಲರೂ ಸಂಘಟಿತರಾಗಬೇಕಾಗಿದೆ. ಈ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರದ ಹಂತದಲ್ಲಿ ಈಡೇರಿಸಿಕೊಳ್ಳುವ ಮೂಲಕ ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸಬೇಕಾಗಿದೆ ಎಂದರು. 

ಹಿರೇಮಠದ ಬಸವರಾಜಪ್ಪ ಸರ್ವಜ್ಞರ ಕುರಿತು ಉಪನ್ಯಾಸ ನೀಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಜಿ. ಸುರೇಂದ್ರಗೌಡ, ಗ್ರೇಡ್-2 ತಹಶೀಲ್ದಾರ್ ಸುರೇಶ್, ತಾಲ್ಲೂಕು ಕುಂಬಾರ ಸಮಾಜದ ಉಪಾಧ್ಯಕ್ಷ ಅವಿನಾಶ್, ಟೈಲರ್ ಬಸವರಾಜ್, ಕಾರ್ಯದರ್ಶಿ ವಿಜಯ್ ಕುಮಾರ್, ನಗರ ಘಟಕದ ಅಧ್ಯಕ್ಷ ಷಣ್ಮುಖಪ್ಪ, ಪದಾಧಿಕಾರಿಗಳಾದ ಎನ್.ಪಿ. ಗಿರೀಶ್, ಚಿಕ್ಕಜೋಗಿಹಳ್ಳಿ ನಾಗರಾಜ್, ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಮಹೇಶಪ್ಪ, ಶಿವರಾಜ್, ಓಂಕಾರಮ್ಮ, ಡಾ. ವೀಣಾ ಕುಂಬಾರ್, ಶಾರದಮ್ಮ, ರೈತ ಮುಖಂಡ ಅರಬಗಟ್ಟೆ ಬಸವರಾಜಪ್ಪ, ಕರಿಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

error: Content is protected !!