ದಾವಣಗೆರೆ,ಫೆ.20- ನಗರದ ಹಿಮೋಫಿಲಿಯಾ ಸಂಸ್ಥೆಯ ವತಿಯಿಂದ ಇದೇ ದಿನಾಂಕ 25 ರಂದು ಬೆಳಿಗ್ಗೆ 6-30 ಗಂಟೆಗೆ `ಅಂತರಾಷ್ಟ್ರೀಯ ವಿರಳ ರೋಗಗಳ ದಿನಾಚರಣೆ’ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ `ರೇಸ್ ಫಾರ್ 7 ಮ್ಯಾರಥಾನ್’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪ್ರತಿ ವರ್ಷ ಫೆಬ್ರವರಿ ತಿಂಗಳ ಕೊನೆಯ ದಿನವನ್ನು `ಅಂತರರಾಷ್ಟ್ರೀಯ ವಿರಳ ರೋಗಗಳ ದಿನಾಚರಣೆ’ಯಾಗಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ವಿರಳ ರೋಗಿಗಳು ಮತ್ತು ಅವರ ಕುಟುಂಬಗಳು ಅತ್ಯಂತ ಕ್ಲಿಷ್ಟಕರ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ವಿರಳ ಎನ್ನುವ ಒಂದೇ ಕಾರಣಕ್ಕೆ ಸಮಾಜ, ಸರ್ಕಾರ ಮತ್ತು ಸಂಘ-ಸಂಸ್ಥೆಗಳ ಗಮನ ಸೆಳೆಯುವಲ್ಲಿ ವಿಫಲವಾಗಿರುವುದು ಸರ್ವೇಸಾಮಾನ್ಯ.
ವಿರಳ ರೋಗಿಗಳ ಕ್ಷೇಮಾಭಿವೃದ್ದಿ ಸಂಸ್ಥೆ-ಭಾರತ (ಓಆರ್ಡಿಐ) 2013 ರಲ್ಲಿ ಪ್ರಾರಂಭಗೊಂಡಿತು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ವೈದ್ಯಕೀಯ ಸೌಲಭ್ಯಗಳ ಆಭಿವೃದ್ಧಿ, ವೈಜ್ಞಾನಿಕ ಲೋಕದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳ ಪ್ರೋತ್ಸಾಹಗಳಿಗೋಸ್ಕರ ಫೆಬ್ರವರಿ ತಿಂಗಳ ಕೊನೆ ದಿನದಂದು ಆನೇಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ.
ಮೂರು ದಶಕಗಳಿಂದ ಹಿಮೋಫಿಲಿಯಾ ಮತ್ತು ಇತರೆ ವಿರಳ ರಕ್ತಸ್ರಾವ ರೋಗಿಗಳ ಕ್ಷೇಮಾಭಿವೃದ್ದಿಗಾಗಿ ಕಾರ್ಯ ನಿರ್ವಹಿಸುತ್ತಿದ್ದು, ಓಆರ್ಡಿಐ ನೊಂದಿಗೆ ಸಹಯೋಗ ಹೊಂದಿದೆ.
ಈ ಅಭಿಯಾನ ಯಶಸ್ವಿಗೊಳಿಸಲು ಭಾಗವಹಿಸುವವರು https://registration.ordindia.in/reg?city=davanagere. ಆನ್ಲೈನ್ನಲ್ಲಿ ನೋಂದಾಯಿಸಿಕೊಳ್ಳಬಹುದು.