ದಾವಣಗೆರೆ, ಫೆ. 18- ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿನೂತನ ಮಹಿಳಾ ಸಮಾಜದ ವತಿಯಿಂದ `ವಿನೂತನ ಸ್ತ್ರೀ ಸೂಪರ್ ಜೋಡಿಗಳು’ ಎಂಬ ಸ್ಪರ್ಧೆ ಯನ್ನು ಹಮ್ಮಿಕೊಂಡಿದ್ದೇವೆ. 50 ವರ್ಷದ ಒಳಗಿನವರಿಗೆ ಹಾಗೂ 50 ವರ್ಷದ ಮೇಲ್ಪಟ್ಟವರಿಗೆ ಎಂದು ಎರಡು ಭಾಗವಾಗಿ ತಂಡ ವಿಭಜಿಸಲಾಗಿದೆ.
ಬರುವ ಮಾರ್ಚ್ 12 ರಂದು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ವಿನಾಯಕ ದೇವಸ್ಥಾನದ ಆವರಣದಲ್ಲಿ ಈ ಸ್ಪರ್ಧೆ ನಡೆಯಲಿದೆ. ವಿವರಕ್ಕೆ 9663823664, 9886177445ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ರೇಖಾ ಓಂಕಾರಪ್ಪ ತಿಳಿಸಿದ್ದಾರೆ.