ನಗರದಲ್ಲಿ ನಾಳೆ ಜಿಲ್ಲಾಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ, ಸಾಂಸ್ಕೃತಿಕ ಸ್ಪರ್ಧೆ

ದಾವಣಗೆರೆ, ಫೆ.18- ಸರ್ಕಾರ ಪ್ರಪ್ರಥಮ ಬಾರಿಗೆ ಯೋಗಾಸನ ಸ್ಪರ್ಧೆಗೆ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನಾಡಿದ್ದು ದಿನಾಂಕ 20 ಮತ್ತು 21ರಂದು ನಡೆಯುವ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ 45 ವರ್ಷದೊಳಗಿನ ಹಾಗೂ 45 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರಿಗೆ ಯೋಗ ಸ್ಪರ್ಧೆ ನಡೆಯಲಿವೆ ಎಂದು ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಎನ್. ವಾಸುದೇವ ರಾಯ್ಕರ್ ತಿಳಿಸಿದ್ದಾರೆ.

ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯೋಗಾಸನಕ್ಕೆ ಅವಕಾಶ ಮಾಡಿಕೊಡುವ ಮೂಲಕ ಯೋಗದ ವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಸರ್ಕಾರದ ಕ್ರಮವನ್ನು ಜಿಲ್ಲಾ ಯೋಗ ಒಕ್ಕೂಟ ಸ್ವಾಗತಿಸುತ್ತದೆ ಎಂದು ಹೇಳಿದರು.

ದಿನಾಂಕ 20 ರಂದು ಮಂಗಳವಾರ ಬೆಳಗ್ಗೆ 10.30ಕ್ಕೆ ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆ ನಂತರ ಅದೇ ವೇದಿಕೆಯಲ್ಲಿ ಯೋಗ ಸ್ಪರ್ಧೆ ನಡೆಯಲಿವೆ.

ಜೂನ್ 21ರಂದು ರಾಜ್ಯ ಮಟ್ಟದ ಯೋಗ ದಿನವನ್ನು ದಾವಣಗೆರೆಯಲ್ಲೇ ನಡೆಸಿಕೊಡಬೇಕು ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಮಾಡಿಕೊಂಡಿರುವ ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ ಮಾತನಾಡಿ, ದಿನಾಂಕ 20 ಮತ್ತು 21ರಂದು ನಡೆಯುವ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸರ್ಕಾರ ಮೊದಲ ಬಾರಿಗೆ ಯೋಗ ಮತ್ತು ಖೋ ಖೋ ಗೆ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಎರಡೂ ಸ್ಪರ್ಧೆಗಳನ್ನು ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. 

ಸಂಘದ ಕಾರ್ಯದರ್ಶಿ ಎಸ್. ಗುರುಮೂರ್ತಿ, ಡಾ. ಯು. ಸಿದ್ದೇಶ್, ಬಾದಾಮಿ ಜಯಣ್ಣ, ಪರಶುರಾಮ್, ಪ್ರಕಾಶ್ ಉತ್ತಂಗಿ, ರಾಜು ಬದ್ವಿ, ತೀರ್ಥರಾಜ್ ಹೋಲೂರು, ನಿರಂಜನ್ ಅಣಬೂರುಮಠ ಮತ್ತಿತರರಿದ್ದರು.

error: Content is protected !!