7ನೇ ವೇತನ ಸರ್ಕಾರದಿಂದ ನೌಕರರ ಮೂಗಿನ ಮೇಲೆ ತುಪ್ಪ

7ನೇ ವೇತನ ಸರ್ಕಾರದಿಂದ  ನೌಕರರ ಮೂಗಿನ ಮೇಲೆ ತುಪ್ಪ

ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರಿಗೆ ಅನ್ವಯವಾಗುವ ಏಳನೇ ವೇತನ ಆಯೋಗವನ್ನು ರಚಿಸಿ ವರ್ಷವೇ ಕಳೆದು ಹೋಗಿದೆ.

ಆದರೆ ವರದಿಯನ್ನು ಪಡೆದು ಕಾಲ ಕಾಲಕ್ಕೆ ನೌಕರರಿಗೆ ನೀಡಬೇಕಾದ ವೇತನ ಮತ್ತು ಇತರೆ ಭತ್ಯಗಳನ್ನು ಪರಿಷ್ಕರಿಸಿ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ಸರ್ಕಾರ ವರದಿಯನ್ನು ತ್ವರಿತವಾಗಿ ಪಡೆಯದೇ ಆಯೋಗದ ಅವಧಿಯನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಮೇಲಾಗಿ  ನಿನ್ನೆ ಮಂಡಿಸಿದ 2024-25ನೇ ಆಯವ್ಯಯದಲ್ಲಿ ಗಟ್ಟಿಯಾದ ಭರವಸೆಯನ್ನು ನೀಡಿರುವುದಿಲ್ಲ ಮತ್ತು ಇದಕ್ಕೆ ಸಂಬಂಧಿಸಿದಂತೆ ಯಾವುದೇ ಹಣವನ್ನು ಕಾಯ್ದಿರಿಸಿರುವುದಿಲ್ಲ.

ಇದನ್ನೆಲ್ಲ ಗಮನಿಸಿದರೆ ನೌಕರರಿಗೆ 7ನೇ ವೇತನದ ಬಗ್ಗೆ ಅನುಮಾನ ಮೂಡಿದೆ. ಮುಖ್ಯಮಂತ್ರಿಗಳು ಆಯವ್ಯಯದಲ್ಲಿ ಆಯೋಗದಿಂದ ವರದಿ ಪಡೆದು ಜಾರಿ ಬಗ್ಗೆ ಪರಿಶೀಲಿಸುವುದಾಗಿ ಮಾತ್ರ ಸಣ್ಣ ಭರವಸೆ ನೀಡಿರುವುದು ನೌಕರರ ಮೂಗಿನ ಮೇಲೆ ತುಪ್ಪ ಇಟ್ಟಂತಾಗಿದೆ. 

– ಎಸ್ ಹಾಲೇಶಪ್ಪ, ನಿ.ಪೂ. ಜಿಲ್ಲಾಧ್ಯಕ್ಷ, ಸರ್ಕಾರಿ ನೌಕರರ ಸಂಘ, ದಾವಣಗೆರೆ 

error: Content is protected !!