ಮನಸ್ಸಿನಲ್ಲಿ ವಿಶಾಲತೆ ಇದ್ದರೆ ಮಾತ್ರ ಸೌಹಾರ್ದತೆಯ ಬದುಕು ಸಾಧ್ಯ

ಮನಸ್ಸಿನಲ್ಲಿ ವಿಶಾಲತೆ ಇದ್ದರೆ ಮಾತ್ರ ಸೌಹಾರ್ದತೆಯ ಬದುಕು ಸಾಧ್ಯ

ಸಂಕ್ಲೀಪುರ : ಸಂಸ್ಮರಣೋತ್ಸವ, ಶಿವದೀಕ್ಷೆ ಕಾರ್ಯಕ್ರಮದಲ್ಲಿ ಆವರಗೊಳ್ಳ ಶ್ರೀಗಳ ಅಭಿಮತ

ಮಲೇಬೆನ್ನೂರು, ಫೆ. 18 – ಮನುಷ್ಯನ ಬದುಕನ್ನು ನಂದನವನವನ್ನಾಗಿ ಮಾಡುವ ನಿಟ್ಟಿನಲ್ಲಿ ಮಠ-ಮಾನ್ಯಗಳು ಶ್ರಮಿಸುತ್ತಿವೆ ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಂಕ್ಲೀಪುರ ಗ್ರಾಮದ ಪುರವರ್ಗ ಮಠದ ಲಿಂಗೈಕ್ಯ ಶ್ರೀ ದೊಡ್ಡ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ ಪುಣ್ಯ ಸಂಸ್ಮರಣೋತ್ಸವ ಮತ್ತು ಶಿವದೀಕ್ಷೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಮಠ-ದೇವಸ್ಥಾನಗಳು ಅವಿಭಕ್ತ ಕುಟುಂ ಬಗಳನ್ನು ಉಳಿಸಲು ಪ್ರೇರೇಪಿಸುತ್ತವೆ. ಆದರೆ ಮನುಷ್ಯ ತನ್ನ ಸ್ವಾರ್ಥ ಗುಣ ಗಳಿಂದಾಗಿ ಹೃದಯದಲ್ಲಿ ವೈಶಾಲ್ಯತೆಯನ್ನು ಕಳೆದುಕೊಂಡು ಸ್ವಾರ್ಥಿಯಾಗಿ ಬದುಕುತ್ತಿ ದ್ದಾನೆಂದು ಬೇಸರ ವ್ಯಕ್ತಪಡಿಸಿದರು.

ಸ್ವಾರ್ಥತನದಿಂದಾಗಿ  ಇತ್ತೀಚೆಗೆ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ ಎಂದ ಶ್ರೀಗಳು, ಮನಸ್ಸಿನಲ್ಲಿ ವಿಶಾಲತೆ ಇದ್ದರೆ ಮಾತ್ರ ಸೌಹಾರ್ದತೆಯ ಬದುಕು ಸಾಧ್ಯ ಎಂದು ಜನರನ್ನು ಎಚ್ಚರಿಸಿದರು.

ಮೌಲ್ಯ-ಶಕ್ತಿ ಇದ್ದ ಕಾಲದಲ್ಲಿ ಜನರಲ್ಲಿ ಶಕ್ತಿ-ಭಕ್ತಿ ಇತ್ತು. ಈಗ ಆಧುನೀಕರಣದ ನೆಪದಲ್ಲಿ ಶಕ್ತಿ-ಭಕ್ತಿ-ಮೌಲ್ಯ-ಪ್ರೀತಿಯನ್ನು ಕಳೆದುಕೊಳ್ಳುತ್ತಿದ್ದಾರೆ.

ಮೊಬೈಲ್ ಬಂದ ಮೇಲೆ ಸಂಬಂಧಿಕರ, ಗೆಳೆಯರ ಭೇಟಿ ಕಡಿಮೆಯಾಗಿ, ಕುಳಿತು ಕಷ್ಟ-ಸುಖ ಮಾತನಾಡುವುದನ್ನು ನಾವು ಕಾಣುತ್ತಿಲ್ಲ ಎಂದ ಶ್ರೀಗಳು, ಇಲ್ಲಿನ ಲಿಂಗೈಕ್ಯ ಶ್ರೀಗಳು ಭಕ್ತರ ಹೃದಯದಲ್ಲಿ ನೆಲೆಸಿರುವ ಕಾರಣ, ಇಲ್ಲಿ ಇಷ್ಟೊಂದು ಜನ ಸೇರಿ ಅವರನ್ನು ಸ್ಮರಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ರಾಮಘಟ್ಟದ ಉಚ್ಚಂಗಿದುರ್ಗ ಕಟ್ಟಿಮನಿ ರಾಜ ಗುರುಗಳಾದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಕ್ತರ ಭಕ್ತಿಯ ಮುಂದೆ ಎಲ್ಲವೂ ಶೂನ್ಯ ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಎಂದರು.

error: Content is protected !!