ರಾಣೇಬೆನ್ನೂರು, ಫೆ.15- ಇಲ್ಲಿಯ ಸಿದ್ದಾರೂಢ ಮಠದಲ್ಲಿ 24ನೇ ವರ್ಷದ ವೇದಾಂತ ಪರಿಷತ್ ಅಂಗವಾಗಿ ಮೂರು ದಿನಗಳ ಕಾಲ ನಡೆಯುವ ಮಹಾಸಭೆ ಹಾಗೂ ನೂತನವಾಗಿ ನಿರ್ಮಿಸಿದ ಶ್ರೀ ಸಿದ್ದಾರೂಢ ಸ್ವಾಮೀಜಿಯ 10ನೇ ಮಹಾರಥೋತ್ಸವದ ಕಾರ್ಯಕ್ರಮದಲ್ಲಿ ಸೋಮವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಬೆಳಗ್ಗೆಯೇ ಸಿದ್ದಾರೂಢ ಮೂರ್ತಿ ಅಭಿಷೇಕ ಸೇರಿದಂತೆ ಪೂಜಾ ಕಾರ್ಯಗಳು ನಡೆದವು. ನಂತರ ಪಿಬಿ ರಸ್ತೆ ಹೊಂದಿಕೊಂಡಿರುವ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿದ ಮುಖ್ಯ ಮಹಾದ್ವಾರದ ಉದ್ಘಾಟನೆ ನೆರವೇರಿಸಲಾಯಿತು. ಹುಬ್ಬಳ್ಳಿಯ ಸಿದ್ದಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಜಡೆಸಿದ್ದೇಶ್ವರ ಮಠದ ರಾಮಾನಂದ ಭಾರತಿ ಸ್ವಾಮೀಜಿ, ಸೌಟಗಿ ಲಿಂಗಯ್ಯ ಸ್ವಾಮೀಜಿ, ತೆಲಗಿಯ ಶಂಭುಲಿಂಗಾಶ್ರಮದ ಪೂರ್ಣಾನಂದ ಸ್ವಾಮೀಜಿ ಹಾಗೂ ಸ್ಥಳೀಯ ಸಿದ್ದಾರೂಢಮಠದ ಮಲ್ಲಜ್ಜಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ನಗರಸಭೆ ಮಾಜಿ ಅಧ್ಯಕ್ಷೆ ರೂಪಾ ಚಿನ್ನಿಕಟ್ಟಿ, ರಾಘವೇಂದ್ರ ಚಿನ್ನಿಕಟ್ಟಿ, ಗಿರೀಶ ಬ್ಯಾಡಗಿ, ಭೀಮಣ್ಣ ಹಾದಿಮನಿ, ವಕೀಲ ಚಂದ್ರು ಕರೇಗೌಡ್ರ, ಶಿವಪ್ಪ ಕುರವತ್ತಿ, ರೇವಣ್ಣ ಎ.ಕೆ., ಶಂಕರ ಆಸಂಗಿ, ಕುಮಾರ ಹಾಲಮಠ, ಪೂರ್ಣಿಮಾ ಅಯ್ಯನಗೌಡ್ರ, ಪೂರ್ಣಿಮಾ ಕುರುವತ್ತಿ, ನೀಲಮ್ಮ ಮುದೋಳ, ರತ್ನವ್ವ ಮೆಲ್ಲಗಟ್ಟಿ, ಸರೋಜಮ್ಮ ಕರಿಗೌಡ್ರ, ಯಶೋಧ ಸೇರಿದಂತೆ ಇತರರಿದ್ದರು.