ತುರ್ಚಘಟ್ಟದಲ್ಲಿ ಗುರುಕುಲ ಉತ್ಸವ

ತುರ್ಚಘಟ್ಟದಲ್ಲಿ ಗುರುಕುಲ ಉತ್ಸವ

ದಾವಣಗೆರೆ, ಫೆ. 15- ತಾಲ್ಲೂಕಿನ ತುರ್ಚಘಟ್ಟ ಗ್ರಾಮದಲ್ಲಿನ ಶ್ರೀ ಗುರುಕುಲ ಅಂತರರಾಷ್ಟ್ರೀಯ ವಸತಿಯುತ ಶಾಲೆ ವತಿಯಿಂದ ಗುರುಕುಲ ಉತ್ಸವವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಅವರು, ಅಪರಾಧಿಗೆ ನ್ಯಾಯಾಧೀಶರು ನೀಡುವ ಶಿಕ್ಷೆಗೂ ಮತ್ತು ಮಕ್ಕಳಿಗೆ ಶಿಕ್ಷಕರು ನೀಡುವ ಶಿಕ್ಷೆಗೂ ಇರುವ ವ್ಯತ್ಯಾಸವನ್ನು ತಿಳಿಸಿದರು.

ಶ್ರೀ ಗುರುಕುಲ ವರ್ಷದ ವ್ಯಕ್ತಿ ಪ್ರಶಸ್ತಿಗೆ ಭಾಜನರಾದ ನಿವೃತ್ತ ಪ್ರಾಚಾರ್ಯರಾದ ಜೆ.ಬಿ. ರಾಜು ಅವರು ಮಾತನಾಡಿ, ಓದು, ಬರಹದ ಜೊತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಹವ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ ಬೆಳವಣಿಗೆ ಎಂದರು.

ಅತಿಯಾದ ಮೊಬೈಲ್ ಬಳಕೆ, ಅತಿಯಾದ ಒಂಟಿತನ ಒಳ್ಳೆಯದಲ್ಲ. ಮೊಬೈಲ್, ಟಿವಿಗೆ ಅಂಟಿಕೊಳ್ಳುವುದನ್ನು ಬಿಟ್ಟು ಓದಿನ ಕಡೆ ಗಮನ ನೀಡುವ ಜೊತೆಗೆ, ಉತ್ತಮ ಹವ್ಯಾಸವನ್ನು ಬೆಳೆಸಿಕೊಳ್ಳಲು ಕರೆ ನೀಡಿದರು. 

ಸಂಸ್ಥೆ ಕಾರ್ಯದರ್ಶಿ ಶ್ರೀಮತಿ ಭವ್ಯ ಮೇಘರಾಜ್ ಮಾತನಾಡಿದರು.ಆಡಳಿತ ಮಂಡಳಿ ಅಧ್ಯಕ್ಷೆ ನಾಗರತ್ನಮ್ಮ, ಪಿಎಸ್‌ಐ ಮೇಘರಾಜ್ ಚನ್ನಗಿರಿ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಸುರೇಶ ಫ್ರಾನ್ಸಿಸ್ ಅವರು ವಾರ್ಷಿಕ ವರದಿ ಮಂಡಿಸಿದರು.  

error: Content is protected !!