ದಾವಣಗೆರೆ,ಫೆ.15- ಪಾಲಿಕೆ ವ್ಯಾಪ್ತಿಯ 21ನೇ ವಾರ್ಡ್ ಬಸಾಪುರ ಗ್ರಾಮದಲ್ಲಿ 80 ವರ್ಷದ ನಿವೃತ್ತ ಇಂಜಿನಿಯರ್ ಬಿ.ಸಿದ್ದನಗೌಡರು ತಮ್ಮ ತಂದೆ ಮಾಜಿ ಚೇರ್ಮನ್ ಕೆ.ಎಸ್ ರೇವಣಸಿದ್ದಪ್ಪನವರ ಹೆಸರಿನಲ್ಲಿ ಸುಮಾರು ನಾಲ್ಕು ಲಕ್ಷ ವೆಚ್ಚದ ರಂಗಮಂದಿರ ನಿರ್ಮಿಸುವ ಮೂಲಕ ತಾವು ಓದಿದ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಸರ್ಕಾರಿ ಶಾಲಾ ಮಕ್ಕಳಿಗೆ ಕೊಡುಗೆಯಾಗಿ ನೀಡಿರುವ ಈ ರಂಗ ಮಂದಿರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅವರು ಉದ್ಘಾಟಿಸಿ, ಸಿದ್ದನಗೌಡ ಮತ್ತು ಶ್ರೀಮತಿ ಶೋಭಾ ದಂಪತಿಯನ್ನು ಸನ್ಮಾನಿಸಿ, ಗೌರವಿಸಿದರು.
ಸಿದ್ದನಗೌಡರು ಈ ಹಿಂದೆ ಸರ್ಕಾರಿ ಶಾಲೆಗೆ ಸುಮಾರು ಒಂದು ಲಕ್ಷ ಮೊತ್ತದ ಎಲ್ಇಡಿ ಹಾಗೂ 13 ಬೆಂಚುಗ ಳನ್ನು ನೀಡಿದ್ದು, ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ ಸಂದ ರ್ಭದಲ್ಲಿ ಸರ್ಕಾರಿ ಶಾಲೆಯ ಮಕ್ಕಳೂ ಸಹ ಖಾಸಗಿ ಶಾಲೆ ಮಕ್ಕಳಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಶಿಕ್ಷಕರ ಬಳಿ ಚರ್ಚಿಸಿದಾಗ, ನಮ್ಮ ಶಾಲಾ ಆವರಣದಲ್ಲಿ ರಂಗಮಂದಿರವಿದ್ದರೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಹುದು ಹಾಗೂ ಮಧ್ಯಾಹ್ನದ ಬಿಸಿ ಊಟ ಮಾಡಲು ಸಹ ಮಕ್ಕಳಿಗೆ ಸಹಾಯವಾಗುತ್ತದೆ ಎಂದು ಶಿಕ್ಷಕರು ತಿಳಿಸಿದರು, ತಕ್ಷಣವೇ ತಾವೇ ಒಂದು ರಂಗಮಂದಿರ ಕಟ್ಟಿಸಿ ಕೊಡೋಣ ಎಂದು ತೀರ್ಮಾನಿಸಿ ರಂಗಮಂದಿರ ನಿರ್ಮಿಸಿದ್ದಾರೆ.
ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚಾಗಿ ಓದುವ ಸರ್ಕಾರಿ ಶಾಲೆಗಳ ಬಗ್ಗೆ ಗಮನ ಹರಿಸಿ ಇನ್ನೂ ಹೆಚ್ಚು ಹೆಚ್ಚಿನ ಸಹಕಾರ ನೀಡುವಂ ತಹ ವ್ಯಕ್ತಿಗಳ ಸಂಖ್ಯೆ ಹೆಚ್ಚಾಗಲಿ ಎಂಬುದು ಸರ್ಕಾರಿ ಶಾಲೆಯ ಮಕ್ಕಳು, ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸಮಿತಿಯವರ ಆಶಯವಾಗಿದೆ.