ಜಗಳೂರು, ಫೆ.15- ಪಟ್ಟಣದ ಈಶ್ವರ ದೇವಸ್ಥಾನದ ಮುಂಭಾಗದಲ್ಲಿ ಮುಖ್ಯಧಿಕಾರಿ ಲೋಕ್ಯಾ ನಾಯ್ಕ್ ಮತ್ತು ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ಆಲಿ ಮತ್ತು ಮಂಜಮ್ಮ ಇ-ಖಾತಾ ಆಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಲೋಕ್ಯಾ ನಾಯ್ಕ್ ಮಾತನಾಡಿ, ಜಿಲ್ಲಾಧಿಕಾರಿಯವರ ಸೂಚನೆಯಂತೆ ನಮ್ಮ ಖಾತೆ, ನಮ್ಮಹಕ್ಕು, ನಮ್ಮ ದಾಖಲೆ ನಮ್ಮ ಹಕ್ಕು ಘೋಷಣೆಯ ಅನ್ವಯ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗಲು ಇ-ಖಾತಾ ಆಂದೋಲನದ ಮೂಲಕ ಮನೆ ಮನೆಗೂ ಇ-ಸ್ವತ್ತು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.
ಆಸ್ತಿ ತೆರಿಗೆ ಪಾವತಿಸಿದ ಎಲ್ಲಾ ಖಾತೆದಾರರಿಗೆ ಇ-ಸ್ವತ್ತು ದಾಖಲೆ ನೀಡಲಾಗುತ್ತದೆ. ಆಂದೋಲನಕ್ಕೆ ಚಾಲನೆ ನೀಡಿ ನಾಗರಿಕರಿಗೆ ಇ-ಸ್ವತ್ತು ಪ್ರಮಾಣ ಪತ್ರವನ್ನು ಸಾಂಕೇತಿಕವಾಗಿ ವಿತರಿಸುತಿದ್ದೇವೆ. ಈ ಕಾರ್ಯಕ್ರಮವು ಇಂದಿನಿಂದ ಬರುವ ಮಾರ್ಚ್ 12 ವರೆಗೆ ಮಾತ್ರ ಇರುತ್ತದೆ. ಪಟ್ಟಣ ವ್ಯಾಪ್ತಿಯ ಎಲ್ಲಾ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ನಂತರ ಪಟ್ಟಣ ಪಂಚಾಯಿತಿ ಸದಸ್ಯೆ ಮಂಜಮ್ಮ ಮಾತನಾಡಿ ಸಾರ್ವಜನಿಕರೇ ನಿಮ್ಮ ಮನೆ ಬಾಗಿಲಿಗೆ ಈ ಸ್ವತ್ತು ಆಂದೋಲನ ಕಾರ್ಯಕ್ರಮಕ್ಕೆ ಇಂದು ನಾವು ಚಾಲನೆ ನೀಡಿದ್ದೇವೆ ಈ ಸ್ವತ್ತು ಮಾಡಿಸಿಕೊಳ್ಳಲು ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆದಾಡಬೇಕಾಗಿತ್ತು. ಆದರೆ ಸರ್ಕಾರ ಇ-ಖಾತಾ ಆಂದೋಲನಾ ಕಾರ್ಯಕ್ರಮದಿಂದ ಆನ್ಲೈನ್ ನಲ್ಲಿ ನಿಮ್ಮ ಮನೆಬಾಗಿಲಿಗೆ ಈ ಸೇವೆ ಬರುತ್ತಿದೆ. ಹಾಗಾಗಿ ಸರಿಯಾದ ರೀತಿಯಲ್ಲಿ ಇದರ ಉಪಯೋಗ ಪಡೆದುಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಪ.ಪಂ ಸದಸ್ಯ ಮಹಮ್ಮದ್ ಆಲಿ, ಕಂದಾಯ ನಿರೀಕ್ಷಕ ಮೋಹಿದ್ದಿನ್, ಸಿಬ್ಬಂದಿಗಳಾದ ನಾಯಕ್, ಗಣಕಯಂತ್ರ ನಿರ್ವಾಹಕ ಚಂದ್ರಣ್ಣ, ಆರೋಗ್ಯ ನಿರೀಕ್ಷಕ ಪ್ರಶಾಂತ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.