ಹರಪನಹಳ್ಳಿ, ಫೆ. 15- ತಾಲ್ಲೂಕಿನ ಮುತ್ತಿಗಿ ಗ್ರಾಮದಲ್ಲಿ ಇದೇ ದಿನಾಂಕ 19 ಮತ್ತು 20 ರಂದು ಶ್ರೀ ಗುರು ಹಾಲಸ್ವಾಮಿ ಜಾತ್ರಾ ಮಹೋತ್ಸವ ಜರುಗಲಿದೆ.
ದಿನಾಂಕ 19ನೇ ಸೋಮವಾರ ರಾತ್ರಿ 10.30.ಕ್ಕೆ ಶ್ರೀ ಸದ್ಗುರು ಶಿವಯೋಗಿ ಅಜ್ಜಯ್ಯ ಹಾಲಸ್ವಾಮೀಜಿ ಸಾನ್ನಿದ್ಯದಲ್ಲಿ ಮುಳ್ಳುಗದ್ದಿಗೆ ಕಾರ್ಯಕ್ರಮ ಜರುಗಲಿದೆ.
ದಿನಾಂಕ 20ನೇ ಮಂಗಳವಾರ ಬೆಳಿಗ್ಗೆ 4 ಗಂಟೆಗೆ ರುದ್ರಾಭಿಷೇಕ ಜಂಗಮ ವಟುಗಳಿಗೆ ಶಿವದೀಕ್ಷೆ ಕಾರ್ಯಕ್ರಮ. ಬೆಳಿಗ್ಗೆ 11.30.ಕ್ಕೆ ಸಾಮೂಹಿಕ ವಿವಾಹಗಳು ಹಾಗೂ ಶ್ರೀ ಗುರು ಹಾಲಸ್ವಾಮಿಯ ಮಹಾ ರಥೋತ್ಸವ ಮತ್ತು ಧರ್ಮಸಭೆ ಜರುಗಲಿದೆ.