ಜಗಳೂರಿನಲ್ಲಿ ಇ-ಆಸ್ತಿ ಆಂದೋಲನ

ಜಗಳೂರಿನಲ್ಲಿ ಇ-ಆಸ್ತಿ ಆಂದೋಲನ

ಜಗಳೂರು, ಫೆ. 15 – ಪಟ್ಟಣ ಪಂಚಾಯತಿ ಆಶ್ರಯದಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಇ-ಆಸ್ತಿ ಸೇವೆ ಆಂದೋಲನ ಹಮ್ಮಿಕೊಂಡಿದ್ದು, ನಾಗರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.

ಪಟ್ಟಣದ ವ್ಯಾಪ್ತಿಯಲ್ಲಿ ಜನರಿಗೆ ಅನುಕೂಲವಾಗಲು ಇ-ಖಾತೆ ಆಂದೋಲನದ ಮೂಲಕ ಮನೆ ಮನೆಗೂ ಇ-ಸ್ವತ್ತು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಆಸ್ತಿ-ತೆರಿಗೆ ಪಾವತಿಸಿದ ಎಲ್ಲಾ ಖಾತೆದಾರರಿಗೆ ಇ-ಸ್ವತ್ತು ದಾಖಲೆ ನೀಡಲಾಗುತ್ತದೆ. ಫೆ 12 ರಿಂದ ಮಾರ್ಚ್ 12 ರವರೆಗೆ ಈ ಆಂದೋಲನ ನಡೆಯಲಿದ್ದು,  ಪಟ್ಟಣದಲ್ಲಿ ವ್ಯಾಪಕ ಪ್ರಚಾರ ನೀಡಲಾಗಿದೆ.

ಆಸ್ತಿ ಕಣಜ ಆನ್ ಲೈನ್ ತಂತ್ರಾಂಶದಲ್ಲಿ ನಮೂದಿಸಬಹುದು. ಅಗತ್ಯ ದಾಖಲೆಗಳನ್ನು ನೀಡಿ ಇ-ಸ್ವತ್ತು  ಪಡೆಯಬಹುದು ಎಂದು ಪಟ್ಟಣ ಪಂಚಾಯತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!