ಶ್ರೀ ದುರ್ಗಾಂಬಿಕಾ ದೇವಿಯ ಜಾತ್ರೆ ಪ್ರಯುಕ್ತ ಹಂದರ ಕಂಬ ಪೂಜಾ ಕಾರ್ಯಕ್ರಮವು ಇಂದು ಬೆಳಿಗ್ಗೆ 10.30ಕ್ಕೆ ನೆರವೇರಲಿದೆ. ದೇವಸ್ಥಾನ ಪುರೋಹಿತ ನಾಗರಾಜ್ ಜೋಯಿಸ್ ಪೂಜೆಯನ್ನು ನಡೆಸಿಕೊಡಲಿದ್ದಾರೆ. ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಉಪಸ್ಥಿತರಿರುವರು ಎಂದು ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ತಿಳಿಸಿದ್ದಾರೆ.
January 11, 2025