ಅಕ್ರಮ ಕಸಾಯಿ ಖಾನೆಗಳ ತೆರವಿಗೆ ಆಗ್ರಹ

ಅಕ್ರಮ ಕಸಾಯಿ ಖಾನೆಗಳ ತೆರವಿಗೆ ಆಗ್ರಹ

ದಾವಣಗೆರೆ, ಫೆ. 13- ನಗರ ದಲ್ಲಿನ ಅಕ್ರಮ ಕಸಾಯಿಖಾನೆಗಳ ತೆರವಿಗೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಘಟಕದ ಕಾರ್ಯ ಕರ್ತರು ಪ್ರತಿಭಟನೆ ನೆಡಸಿದರು.

ಕಾಯಿಪೇಟೆಯ ಬಸವೇಶ್ವರ ದೇವಸ್ಥಾನ ಆವರಣದಿಂದ ಮೆರ ವಣಿಗೆ ನಡೆಸಿದ ಕಾರ್ಯಕರ್ತರು, ನಗರಪಾಲಿಕೆ ಬಳಿ ಜಮಾಯಿಸಿ, ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸು ವಂತೆ ಪಟ್ಟು ಹಿಡಿದರು. ಉಪವಿಭಾ ಗಾಧಿಕಾರಿ ಎನ್. ದುರ್ಗಾಶ್ರೀ ಆಗಮಿಸಿ ಮನವಿ ಸ್ವೀಕರಿಸಿದರು.

ನಗರದಲ್ಲಿ ಸುಮಾರು 62 ಅಕ್ರಮ ಕಸಾಯಿಖಾನೆಗಳಿವೆ. ದಿನ ದಲ್ಲಿ ನೂರಾರು ಗೋವುಗಳ ವಧೆ ನಡೆಯುತ್ತಿದ್ದು, ಹಿಂದೂಗಳ ಭಾ ವನೆಗೆ ಧಕ್ಕೆ ತಂದಿದೆ. ಈ ಕಸಾಯಿ ಖಾನೆಗಳ ತೆರವಿಗೆ ಹಲವು ಬಾರಿ ಒತ್ತಾಯಿಸಿ ಜಿಲ್ಲಾಧಿಕಾರಿ, ಎಸ್ಪಿ, ನಗರಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಹತ್ಯಾ ನಿಷೇಧ ಕಾನೂನು ಜಾರಿಯಲ್ಲಿದ್ದರೂ ನಿರಂತರ ಗೋಹತ್ಯೆ ನಡೆಯುತ್ತಿದೆ. ಇದನ್ನು ನೋಡಿಯೂ ಕೆಲ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮವಾಗುತ್ತಿಲ್ಲ. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ನಗರಕ್ಕೆ ಬೇಡ ಎಂದು ಹೇಳಿದರು.

ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ಇನ್ನಾ ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳ ದಿದ್ದರೆ ಹಿಂದೂ ಜಾಗರಣ ವೇದಿಕೆ ವತಿಯಿಂದಲೇ ಮುಂದಿನ ದಿನಗಳಲ್ಲಿ ಕಸಾಯಿ ಖಾನೆಗಳಿಗೆ ನುಗ್ಗುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು. ಸಂಘಟನೆಯ ಪ್ರಾಂತ ಸಹ ಸಂಚಾಲಕ ಸತೀಶ್ ಪೂಜಾರಿ, ಜಿಲ್ಲಾ ಸಂಚಾಲಕ ವೀರೇಶ್ ಮಟ್ಟಿಕಲ್, ಮುಖಂಡರಾದ ವಿನಾಯಕ ರಾನಡೆ, ರಾಜನಹಳ್ಳಿ ಶಿವಕುಮಾರ್, ಪುನೀತ್ ನಿಟುವಳ್ಳಿ, ವೀರೇಶ್, ಗಿರೀಶ್, ಮನು ಮತ್ತಿತರರು ಉಪಸ್ಥಿತರಿದ್ದರು.

error: Content is protected !!