ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ವಾರ್ಷಿಕೋತ್ಸವ, ರಥೋತ್ಸವ

ನಗರದ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಇಂದಿನಿಂದ ವಾರ್ಷಿಕೋತ್ಸವ, ರಥೋತ್ಸವ

ದೇವರಾಜ ಅರಸು ಬಡಾವಣೆಯಲ್ಲಿ ರುವ ಶ್ರೀ ಮಾತಾ ಅನ್ನಪೂರ್ಣೆಶ್ವರಿ ದೇವಸ್ಥಾನದ 26 ನೇ ವಾರ್ಷಿಕೋತ್ಸವ ಹಾಗೂ ರಥೋತ್ಸವ ಕಾರ್ಯಕ್ರಮ ಇಂದಿನಿಂದ ಇದೇ ದಿನಾಂಕ 16 ರವರೆಗೆ ಹಮ್ಮಿಕೊಳ್ಳಲಾಗಿದೆ  

ಇಂದು ಬೆಳಿಗ್ಗೆ 7.30 ರಿಂದ ದೇವಿಗೆ ಪಂಚಾಮೃತ ಅಭಿಷೇಕ, ಅಲಂಕಾರ, ವಿಶೇಷವಾಗಿ ಸಹಸ್ರ ನಾಮಾವಳಿ, ಪುಷ್ಪಾರ್ಚನೆ, ಕುಂಕುಮಾರ್ಚನೆ, ಮಂತ್ರ ಪುಷ್ಪ ಹಾಗೂ ಶ್ರೀ ದುರ್ಗಾ ಹೋಮ, ಅನ್ನ ಸಂತರ್ಪಣೆ ನೆರವೇರಲಿದೆ. ಸಂಜೆ 5 ಕ್ಕೆ ಶ್ರೀ ಲಲಿತ ಸಹಸ್ರ ನಾಮಾವಳಿಯೊಂದಿಗೆ ಕುಂಕುಮಾರ್ಚನೆ, ಭಜನಾ ಕಾರ್ಯಕ್ರಮ ನಡೆಯಲಿದೆ. ನಾಳೆ ಬುಧವಾರ ಬೆಳಿಗ್ಗೆ 8 ಗಂಟೆಯಿಂದ ಅಭಿಷೇಕ, ಕಳಸ ಸ್ಥಾಪನೆ, ನವಗ್ರಹ ಹೋಮ, ಪೂರ್ಣಾಹುತಿ, ಮಹಾ ಮಂಗಳಾರತಿ, ಮಂತ್ರಪುಷ್ಪ, ಅಷ್ಟಾವಧಾನ ಸೇವೆ, ತೀರ್ಥಪ್ರಸಾದ ವಿನಿಯೋಗವಿದೆ. ಸಂಜೆ 7 ಗಂಟೆಗೆ `ಶಿವ ದಾಕ್ಷಾಯಿಣಿ ನೃತ್ಯ ವೈಭವ’ ರೂಪಕವನ್ನು ತಪಸ್ಯ ವಾಸವಿ ಸಂಸ್ಥೆಯ ಮಕ್ಕಳು ಪ್ರದರ್ಶಿಸಲಿದ್ದಾರೆ.

ದಿನಾಂಕ 15 ರ ಗುರುವಾರ ಬೆಳಿಗ್ಗೆ 8 ಗಂಟೆಗೆ ಪಂಚಾಮೃತ ಅಭಿಷೇಕ, ಮಂಡಲ ಆರಾಧನೆ, ರುದ್ರಹೋಮ, ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 5 ಕ್ಕೆ ಶ್ರೀ ಗಿರಿಜಾ ಶಂಕರ ಕಲ್ಯಾಣ ಹಮ್ಮಿಕೊಳ್ಳಲಾಗಿದ್ದು, ಬೆಂಗಳೂರಿನ ಪುರೋಹಿತರಾದ ಜಿ. ಪ್ರವೀಣ್ ಅವರಿಂದ ನಡೆಯಲಿದೆ. ಇದಲ್ಲದೇ ಪ್ರತಿ ಶನಿವಾರ ಸಂಜೆ 6.30 ಕ್ಕೆ ದೇವಸ್ಥಾನದಲ್ಲಿ ಹನುಮಾನ್ ಚಾಲಿಸ್ ಪಠಣ ನಡೆಯಲಿದೆ.

error: Content is protected !!