ಒಣಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಿಸಲು ಕ್ರಮ ಕೈಗೊಳ್ಳಿ : ಸಂಸದ ಜಿ.ಎಂ.ಸಿದ್ದೇಶ್ವರ ಮನವಿ

ಒಣಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಿಸಲು  ಕ್ರಮ ಕೈಗೊಳ್ಳಿ : ಸಂಸದ ಜಿ.ಎಂ.ಸಿದ್ದೇಶ್ವರ ಮನವಿ

ದಾವಣಗೆರೆ, ಫೆ. 12-   ನೆಫೆಡ್‌ (ನ್ಯಾಷನಲ್ ಅಗ್ರಿಕಲ್ಚರಲ್ ಕೋಆಪರೇಟೀವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ)ಮೂಲಕ ಒಣಕೊಬ್ಬರಿ ಖರೀದಿ ಹೆಚ್ಚಿಸುವಂತೆ ಕೋರಿ ನವದೆಹಲಿಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದರು.

ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಒಣಕೊಬ್ಬರಿ ಉದ್ಯಮ ಪ್ರಮುಖ ಪಾತ್ರ ವಹಿಸುತ್ತಿರುವುದನ್ನು ಸಚಿವರ ಗಮನಕ್ಕೆ ತಂದಿದ್ದು,  ಪ್ರಸ್ತುತ ಕರ್ನಾಟಕದಲ್ಲಿ 62 ಸಾವಿರ ಮೆಟ್ರಿಕ್ ಟನ್ ಒಣಕೊಬ್ಬರಿಯನ್ನು ನೆಫೆಡ್‌ ಮೂಲಕ ಖರೀದಿ ಮಾಡಲಾಗಿದೆ.

ಇನ್ನೂ 60 ಸಾವಿರ ಮೆಟ್ರಿಕ್ ಟನ್ ಒಣಕೊಬ್ಬರಿ ದಾಸ್ತಾನು ಕೊಬ್ಬರಿ ಮಾರುಕಟ್ಟೆಯಲ್ಲಿ ಹಾಗೂ ಬೆಳೆಗಾರರ ಬಳಿ ಇದೆ. ಇದರಲ್ಲಿ ಕನಿಷ್ಟ 50 ಸಾವಿರ ಮೆಟ್ರಿಕ್ ಟನ್‍ನಷ್ಟು ನೆಫೆಡ್‌ ಮೂಲಕ ಖರೀದಿಸುವ ಕೆಲಸವಾಗಬೇಕು ಎಂದು ಒತ್ತಾಯಿಸಿದ್ದಾರೆ. 

ಖರೀದಿ ಪ್ರಕ್ರಿಯೆಯಲ್ಲಿ ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡುವಂತೆ ಸಚಿವರಲ್ಲಿ ಸಂಸದರು ಆಗ್ರಹಿಸಿದ್ದಾರೆ.

error: Content is protected !!