ಕ್ರಿಕೆಟ್ ಆಟಗಾರರ ನೆಚ್ಚಿನ ಗುರುವಾಗಿದ್ದ ಸಿ.ಕೆ.ಮೂರ್ತಿ

ಕ್ರಿಕೆಟ್ ಆಟಗಾರರ ನೆಚ್ಚಿನ ಗುರುವಾಗಿದ್ದ ಸಿ.ಕೆ.ಮೂರ್ತಿ

ನಗರದಲ್ಲಿ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ದಿನೇಶ್ ಕೆ. ಶೆಟ್ಟಿ ಸ್ಮರಣೆ

ದಾವಣಗೆರೆ,ಫೆ.11- ನಗರದಲ್ಲಿ ಕ್ರಿಕೆಟ್‌ ಬೀಜವನ್ನು ಬಿತ್ತಿ, ನೂರಾರು ಕ್ರೀಡಾಪಟುಗಳ ಪಾಲಿನ ನೆಚ್ಚಿನ ಗುರು ಆಗಿದ್ದ ದಿ. ಸಿ.ಕೆ.ಮೂರ್ತಿ ಸ್ಮರಣಾರ್ಥ ಪ್ರತಿ ವರ್ಷ ರಾಜ್ಯಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸುವ ಉದ್ದೇಶವಿದೆ ಎಂದು ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿಯೂ ಆದ ಹಿರಿಯ ಕ್ರಿಕೆಟ್ ಪಟು ದಿನೇಶ ಕೆ.ಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಡಿಸಿಸಿ ವತಿ ಯಿಂದ   ದಿ. ಸಿ.ಕೆ.ಮೂರ್ತಿ ಸ್ಮರಣಾರ್ಥ  ಮೊಟ್ಟ ಮೊದಲ ಬಾರಿಗೆ ಬಿಳಿ ಬಣ್ಣದ ಚೆಂಡಿನ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಹಿರಿಯ ಕ್ರೀಡಾಪಟು, ಹೃದ್ರೋಗ ತಜ್ಞ ಡಾ.ಪ್ರಕಾಶ ಹಿರೇಮಠ್‌ ಜೊತೆಗೆ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರಿಕೆಟ್ ಅಂದರೆ ಸಿ.ಕೆ.ಮೂರ್ತಿ, ಸಿ.ಕೆ.ಮೂರ್ತಿ ಅಂದರೆ ಕ್ರಿಕೆಟ್ ಎಂಬುಷ್ಟರ ಮಟ್ಟಿಗೆ ಜನರ ಮನಸ್ಸಿನಲ್ಲಿ ಮೂರ್ತಿ ಆವರಿಸಿದ್ದಾರೆ ಎಂದರು.

ಹಿರಿಯ ಕ್ರೀಡಾಪಟು ಸಿ.ಜಿ.ಶ್ರೀಪತಿ ಮಾತನಾಡಿ, 1956ರಲ್ಲಿ ಡಿಸಿಸಿ ಹುಟ್ಟು ಹಾಕಿದಾಗ,   ಬ್ಯಾಟ್ ಹಿಡಿಯೋರು ಇರಲಿ, ಕ್ರೀಡಾಂಗಣದಲ್ಲಿ ಸಹ ಯಾರೂ ಇರಲಿಲ್ಲ. ಅಂತಹ ಕಾಲಘಟ್ಟದಲ್ಲಿ ತಮ್ಮ ಸಹೋದರ ಸಿ.ಕೆ.ಮೂರ್ತಿ ಇಲ್ಲಿ ಕ್ರಿಕೆಟ್‌ ಓಂಕಾರ ಬರೆದರು. ಗುರು ಬಳಿ ಕ್ರಿಕೆಟ್ ಕಲಿತವರು ಇಂದು ಎಲ್ಲೆಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರಿಕೆಟ್‌ ನಿಂದಲೇ ಭವಿಷ್ಯ ಕಟ್ಟಿಕೊಂಡಿದ್ದಾರೆ ಎಂದರು. 

ಹಿರಿಯ ಕ್ರೀಡಾಪಟು ಡಿ.ಎ.ರಾಜಶೇಖರ್‌ ಮಾತನಾಡಿ, ಟೆನ್ನಿಸ್ ಬಾಲ್ ಹಾವಳಿಯ ಮಧ್ಯೆ ಲೆದರ್ ಬಾಲ್ ಕ್ರಿಕೆಟ್ ತಮ್ಮನ್ನ ವೈಭವ ಕಳೆದುಕೊ ಳ್ಳುತ್ತಿದೆ ಎಂದು ವ್ಯಾಕುಲತೆ ವ್ಯಕ್ತಪಡಿಸಿದರು. 

ಡಿಸಿಸಿ ಕ್ರೀಡಾಪಟು, ಪತ್ರಕರ್ತ ನಾಗರಾಜ ಎಸ್.ಬಡದಾಳ್ ಮಾತನಾಡಿ,  ಸಿ.ಕೆ.ಮೂರ್ತಿ ಹೆಸರನ್ನು ಪೆವಿಲಿಯನ್ ರಸ್ತೆ ಅಥವಾ ಹರ್ಷ ಬಾರ್‌ ಬಳಿಯಿಂದ ಡೆಂಟಲ್ ಕಾಲೇಜು ರಸ್ತೆಗೆ ಸಾಗುವ ಮಾರ್ಗಕ್ಕೆ  ಇಡಲು ಒತ್ತಾಯಿಸೋಣ ಎಂದು ತಿಳಿಸಿದರು.

ಹಿರಿಯ ಕ್ರೀಡಾಪಟುಗಳಾದ ನಿವೃತ್ತ ಹೃದ್ರೋಗ ತಜ್ಞ ಡಾ.ಪ್ರಕಾಶ ಹಿರೇಮಠ್‌, ಬಾಲಕೃಷ್ಣ ಬಾಲು, ಬಿಸಿಎಚ್‌ಐ ಮಂಜುನಾಥ ರೊಳ್ಳಿ, ಹರಿಹರದ ಅಜಿತ್ ಸಾವಂತ್‌, ದಾವಿವಿ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಜ ಕುಮಾರ, ಜೆಜೆಎಂ ವೈದ್ಯಕೀಯ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಗೋಪಾಲ ಕೃಷ್ಣ, ಎಂ.ಆರ್‌.ಮಾಲತೇಶ, ಅಬಿದ್ ಅಲಿ, ತುಮಕೂರು ವಲಯದ ಆಯ್ಕೆ ಸಮಿತಿಯ ಎಲ್.ಎಂ.ಪ್ರಕಾಶ, ಗೋಪಾಲ ಕೃಷ್ಣ, ಕೋಚ್‌ ತಿಮ್ಮೇಶ್‌, ಜಿಲ್ಲಾ ಪೊಲೀಸ್ ಇಲಾಖೆ ಎಎಸ್ಐ ನಾಗೇಶ್ ಗೌಡ, ಸಿ.ಜಿ.ಗುಂಡಣ್ಣ, ಜಿಪಂ ನಾಗೇಶ, ಅನಿಲ್‌, ಪ್ರಭುಗೌಡ ಮುಂಡರಗಿ, ಅನಿಲ್‌, ವಿಕಾಸ್ ಸದಾಶಿವ, ತೇಜು, ನವೀನ್‌, ಅಂಕುಶ್‌, ಗುರುರಾಜ ಉಪಾಧ್ಯಾಯ ಇತರರು ಇದ್ದರು.

error: Content is protected !!