ಮಾತೃಭಾಷೆ ಜೊತೆಗೆ ಇಂಗ್ಲಿಷ್ ಇದ್ದರೆ ಯಶಸ್ಸು

ಮಾತೃಭಾಷೆ ಜೊತೆಗೆ ಇಂಗ್ಲಿಷ್ ಇದ್ದರೆ ಯಶಸ್ಸು

ರಾಣೇಬೆನ್ನೂರು ಶಾಸಕ ಕೋಳಿವಾಡ

ರಾಣೇಬೆನ್ನೂರು,ಫೆ.9- ಮಾತೃ ಭಾಷೆ ಜೊತೆಗೆ ಇಂಗ್ಲಿಷ್ ಭಾಷೆ ಕರಗತ ಮಾಡಿಕೊಂಡಾಗ ಉನ್ನತ ಅಭ್ಯಾಸದಲ್ಲಿ ಯಶಸ್ಸು ಗಳಿಸಬಹುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ಇಲ್ಲಿನ ವಾಗೀಶ ನಗರದ ಕೆ.ಬಿ.ಕೋಳಿವಾಡ ಸಭಾಭವನದಲ್ಲಿ ಬೆಂಗ ಳೂರಿನ ಬಿ.ಅರಸೋಜಿರಾವ್ ಧರ್ಮ ಸಂಸ್ಥೆ ವತಿಯಿಂದ ಮಠಾರ ಸಮಾಜದ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೊಡಮಾಡುವ ವಿದ್ಯಾರ್ಥಿ ವೇತನ ವಿತರಿಸಿ ಅವರು ಮಾತನಾಡಿದರು.  ನಮ್ಮ ಪಿಕೆಕೆ ಸಂಸ್ಥೆ ವತಿಯಿಂದ ಈಗಾಗಲೇ ಸಾಕಷ್ಟು ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಉಚಿತ ವಾಗಿ ನೀಡುತ್ತಿದ್ದು, ಪದವೀಧರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಬಿ.ಅರಸೋಜಿರಾವ್ ಸಂಸ್ಥೆ ವಿದ್ಯಾರ್ಥಿಗಳಿಗೆ ಪೋತ್ಸಾಹ ನೀಡುತ್ತಿರುವು ದು ಶ್ಯಾಘನೀ ಯವಾಗಿದೆ. ಇದೇ ರೀತಿ ನಿರಂತರ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲಿ ಎಂದರು.

ಸಂಸ್ಥೆ ಅಧ್ಯಕ್ಷ ಡಾ.ಜಿವೋಜಿರಾವ್ ಮಾತನಾಡಿ, ನಮ್ಮ ಸಂಸ್ಥೆ ಸಂಸ್ಥಾಪಕರು ಅವಿದ್ಯಾವಂತರಾಗಿದ್ದರು. ಹುಟ್ಟೂರು ಬಿಟ್ಟು ಬೆಂಗಳೂರಿಗೆ ಬಂದು ಕಷ್ಟ ಪಟ್ಟು ದುಡಿದು ಕಲ್ಯಾಣ ಮಂಟಪ ಹಾಗೂ ವಾಣಿಜ್ಯ ಮಳಿಗೆ ಕಟ್ಟಿ ಅದರಿಂದ ಬಂದ ಹಣವನ್ನು ಮರಾಠ ಸಮಾಜದ ವಿದ್ಯಾರ್ಥಿಗಳ ಏಳಿಗೆಗೆ ವಿನಿಯೋಗ ಮಾಡುತ್ತಾ  ಪೋತ್ಸಾಹ ನೀಡುತ್ತಾ ಬಂದಿದ್ದಾರೆ. ತಾಲ್ಲೂಕಿನ ಮರಾಠ ಸಮಾಜದ ವಿದ್ಯಾರ್ಥಿಗಳಿಗೆ 2 ಲಕ್ಷದವರಿಗೂ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.

ಜಿ.ಎಚ್.ಮರಿಯೋಜಿರಾವ್, ಪ್ರಕಾಶ ಮಂಜೂಚಿ, ನಾಗರಾಜ ಮಾಕನೂರು, ಗ್ರಾಪಂ ಅಧ್ಯಕ್ಷ ರಾಜು ಹಲವಾಗಲ, ಏಕನಾಥ ಮುದಿಗೌಡ್ರ ಸೇರಿದಂತೆ ಮತ್ತಿತರು ಇದ್ದರು.

error: Content is protected !!