ಬೋಧನೆ, ಕಲಿಕೆ ಇಷ್ಟಪಟ್ಟು ಆಗಬೇಕು : ಬಿಇಒ ಪುಷ್ಪಲತಾ

ಬೋಧನೆ, ಕಲಿಕೆ ಇಷ್ಟಪಟ್ಟು ಆಗಬೇಕು : ಬಿಇಒ ಪುಷ್ಪಲತಾ

ದಾವಣಗೆರೆ, ಫೆ. 6- ಬೋಧನೆ ಆಗಲಿ, ಕಲಿಕೆ ಆಗಲಿ ಕಷ್ಟಪಟ್ಟು ಆಗಬಾರದು, ಇಷ್ಟಪಟ್ಟು ಆಗಬೇಕು. ಆಗ ಮಾತ್ರ ಅದು ಹೆಚ್ಚು ಕಾಲ ನೆನಪಿನಲ್ಲಿ ಉಳಿಯಬಲ್ಲದು ಎಂದು ದಾವಣಗೆರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪುಷ್ಪಲತಾ ತಿಳಿಸಿದರು.

ಅವರು ಟೆಲಿಗ್ರಾಂ ಆಪ್ ಮುಖಾಂತರ ಆನ್‌ಲೈನ್‌ನಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಮೈಸೂರು, ಕಲಾವಿದ ಶಿಕ್ಷಕರ ವೇದಿಕೆ ವತಿಯಿಂದ ರಾಜ್ಯಮಟ್ಟದ ಶಿಕ್ಷಕರ ಏಕಪಾತ್ರಾಭಿನಯ ಸ್ಪರ್ಧೆ ಫಲಿತಾಂಶ ಪ್ರಕಟಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಉಪಸ್ಥಿತರಿದ್ದು ಮಾತನಾಡಿದರು.

ಪ್ರತಿಭಾ ಪರಿಷತ್ತಿನ ಕಾರ್ಯದರ್ಶಿ ಸಂತೋಷ್ ಕುಮಾರ್ ಬಂಡೆ ಮಾತನಾಡಿ, ನಮ್ಮ ಕೈಯ್ಯಲ್ಲಿ ಕಲಿಯುವ ಮಕ್ಕಳ ಭವಿಷ್ಯ ಉಜ್ವಲವಾಗುವಂತೆ ಮಾಡಿದಾಗ ಶಿಕ್ಷಕನ ಬದುಕು ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು. ಈ ತರಹದ ಕಾರ್ಯಕ್ರಮಗಳು ಅದಕ್ಕೆ ಪೂರಕ ಎಂದು ಸಂತಸವನ್ನು ವ್ಯಕ್ತಪಡಿಸಿದರು ಹಾಗೂ ಆನ್‌ಲೈನ್ ನಲ್ಲಿ ವಿಜೇತರ  ಫಲಿತಾಂಶವನ್ನು ಪ್ರಕಟಿಸಿದರು. 

 ತದನಂತರದಲ್ಲಿ  ಶಿಕ್ಷಕರ ಪ್ರತಿಭಾ ಪರಿಷತ್ತಿನ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷ ಪಿ. ಮಹೇಶ್ ,  ತಾಂತ್ರಿಕ ವಿಭಾಗದ ಮುಖ್ಯಸ್ಥ  ಚಂದ್ರಶೇಖರ್ ನಾಯಕ, ಸಂಪನ್ಮೂಲ ವ್ಯಕ್ತಿ ಬಿ.ಕೆ. ಸತೀಶ್, ರಾಜ್ಯ ಸಹಕಾರ ಸಮಿತಿಯ ಮುಖ್ಯಸ್ಥರಾದ ಉಮಾದೇವಿ ಗುಡ್ಡದ ಅವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.

ವಿಜೇತರಾದ ಕೊಟ್ರೇಶ್, ಶ್ರೀಮತಿ ಲಲಿತಾ ಮಿಣಚಿ, ಕೆಂಚಪ್ಪ,  ದಿವಾಕರ್ ಬಲ್ಲಾಳ, ಶ್ರೀಮತಿ ದವಳ ಜೈನ್   ಅವರು ಅವಕಾಶ ಕಲ್ಪಿಸಿಕೊಟ್ಟ ಪ್ರತಿಭಾ ಪರಿಷತ್ತನ್ನು ಮನಸಾರೆ ಹೊಗಳಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಜಯಂತಿ ಹುದ್ದಾರ್ ಪ್ರಾರ್ಥಿಸಿದರು. ಶ್ರೀಮತಿ ಪರ್ವೀನ್ ನದಾಫ್ ಸ್ವಾಗತಿಸಿದರು. ಎಲ್. ಮೂರ್ತಿ ನಿರೂಪಿಸಿದರು. ರುದ್ರಮುನಿ ಅಣಜಿ ವಂದಿಸಿದರು.

error: Content is protected !!