ಕಳೆದ ಜನವರಿ 12 ರಿಂದ ಒಂದು ತಿಂಗಳ ಪರ್ಯಂತ ಹೆಬ್ಬಾಳು ವಿರಕ್ತಮಠದ ಶ್ರೀ ಗುರು ಶಿವಯೋಗಿ ಮಹಾರುದ್ರ ಮಹಾಸ್ವಾಮಿಗಳವರ ಪುರಾಣ – ಪ್ರವಚನ ನಡೆದಿದ್ದು, ಇಂದು ಸಂಜೆ 6.30 ಗಂಟೆಗೆ ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಮಾರೋಪಗೊಳ್ಳಲಿದೆ.
ಪ್ರತಿವರ್ಷದಂತೆ ಈ ವರ್ಷವೂ ಪುರಾಣ – ಪ್ರವಚನವನ್ನು ಏರ್ಪಡಿಸಲಾಗಿದ್ದು, ಪಂಡಿತ ಶ್ರೀ ಪುಟ್ಟರಾಜ ಕವಿ ಗವಾಯಿಯವರ ಶಿಷ್ಯರಾದ ಕಲ್ಬುರ್ಗಿ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತಿಗಳು ಪ್ರವಚನವನ್ನು ನಡೆಸಿಕೊಟ್ಟಿದ್ದು, ಈ ವರ್ಷ 48ನೇ ವರ್ಷದ ಪ್ರವ ಚನವಾಗಿದೆ ಎಂದು ಸಂಚಾ ಲಕರಾದ ಅಜ್ಜಂಪುರ ಶೆಟ್ರು ಮೃತ್ಯುಂಜಯ, ರುದ್ರೇಶ್ ಮತ್ತು ಸಿ.ಕೆ. ಬಸವರಾಜಪ್ಪ ಕೋರಿದ್ದಾರೆ.