ರಾಣೇಬೆನ್ನೂರು, ಫೆ.5- ಕೇಂದ್ರ ಸರ್ಕಾರದ ಮೋದಿ ನೇತೃತ್ವದ ಕೊನೆಯ ಬಜೆಟ್ನಲ್ಲಾದರೂ ರೈತರ ಸಾಲ ಮನ್ನಾ ಯೋಜನೆ ಘೋಷಿಸುತ್ತಾರೆಂದು ಭಾವಿಸಿದ್ದೆವು, ಆದರೆ ಕೊನೆಗೂ ಮೋದಿ ರೈತರ ಬಗ್ಗೆ ಕರುಣೆ ತೋರಲಿಲ್ಲ ಎಂದು ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದ 28 ಸಂಸದರು ದೇಶದ 544 ಸಂಸತ್ ಸದಸ್ಯರು ಮೋದಿ ಎದುರು ನಿಂತು ರೈತರ ಬವಣೆಯ ಬಗ್ಗೆ ಮಾತನಾಡದಷ್ಟು ಅಸಮರ್ಥರಾದದ್ದು ನಮ್ಮ ದೇಶದ ದುರ್ದೈವ, ಅದು ಹೋಗಲಿ ಕನಿಷ್ಠ ಬೆಂಬಲ ಬೆಲೆಯನ್ನು ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ನೀಡಬೇಕಾಗಿತ್ತು. ಆದರೆ ಕೆಲವೇ ಕೆಲವು ಆಯ್ದ ಬೆಳೆಗಳಿಗೆ ನೀಡಿರುವುದು ಬೇಸರದ ಸಂಗತಿ ಎಂದಿದ್ದಾರೆ.