ಮಲೇಬೆನ್ನೂರು ಸಮೀಪದ ಹೊಸಪಾಳ್ಯದಲ್ಲಿ ಇಂದು ಬೆಳಿಗ್ಗೆ 10ಕ್ಕೆ `ನಮ್ಮೂರು ನಮ್ಮ ಕೆರೆ’ ಕಾರ್ಯಕ್ರಮದಡಿಯಲ್ಲಿ ಶ್ರೀ ಕರಿಯಮ್ಮ ದೇವಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ಗೀತಾ ಚಾಲನೆ ನೀಡಲಿದ್ದಾರೆ ಎಂದು ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ, ಕೃಷಿ ಮೇಲ್ವಿಚಾರಕ ಗಂಗಾಧರ್ ತಿಳಿಸಿದ್ದಾರೆ. ಕೆರೆ ಸಮಿತಿ ಅಧ್ಯಕ್ಷ ಗದಿಗೇಶಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಯೋಜನೆಯ ಜಿಲ್ಲಾ ನಿರ್ದೇಶಕ ಎಂ. ಲಕ್ಷ್ಮಣ. ಗ್ರಾ.ಪಂ. ಅಧ್ಯಕ್ಷೆ ಮಂಜಮ್ಮ ಶೇಖರಪ್ಪ, ಪಿಡಿಓ ಶಿಲ್ಪಾ ಅತಿಥಿಗಳಾಗಿದ್ದಾರೆ.
December 23, 2024