ಹರಪನಹಳ್ಳಿ, ಫೆ.4- ಹರಪನಹಳ್ಳಿ ತಾಲ್ಲೂಕು ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ. ಅಧ್ಯಕ್ಷರಾಗಿ ಟಿ.ಎಂ. ಕೊಟ್ರೇಶ್, ಗೌರವಾಧ್ಯಕ್ಷರಾಗಿ ಹೆಚ್.ಕೆ. ಚಂದ್ರಪ್ಪ, ಕಾರ್ಯದರ್ಶಿಯಾಗಿ ಹೆಚ್. ಆನಂದ್ ಆಯ್ಕೆಯಾಗಿದ್ದಾರೆ.
ಖಜಾಂಚಿಯಾಗಿ ಹೆಚ್. ಜಯಪ್ಪ, ಉಪಾಧ್ಯಕ್ಷರಾಗಿ ಚಂದ್ರಪ್ಪ ಕೆ.ಓ.ಶಂಕ್ರನಾಯಕ್, ಸಹಕಾರ್ಯದರ್ಶಿಯಾಗಿ ಎನ್. ಇಸ್ಮಾಯಿಲ್ ಸಾಬ್, ಕೊಟ್ರಮ್ಮ, ಚೇತನ್ ಬಣಕಾರ್, ಸಂಘಟನಾ ಕಾರ್ಯದರ್ಶಿಯಾಗಿ ಪರಶುರಾಮಪ್ಪ ಬಿ., ಪ್ರಕಾಶ್ ಬಿ.ಟಿ. ಮೋಟ್ಲಾ ನಾಯಕ್, ನಿರ್ದೇಶಕರಾಗಿ ವೃಷಭೇಂದ್ರಪ್ಪ, ಜೆ. ಬಸವಕುಮಾರ್, ಎಚ್. ಅಶೋಕ್, ಬಿ ಬಸವರಾಜ್, ಸೂರ್ಯ ನಾಯಕ್, ಟಿ.ಹೊನ್ನಪ್ಪ, ಶಬಾನಾ ಆಫೀಸರ್, ಪ್ರಕಾಶ ಆಯ್ಕೆಯಾಗಿದ್ದಾರೆ.
ಆಯ್ಕೆಯ ಸಂದರ್ಭದಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಶಿವಾಜಿ ನಾಯ್ಕ ಹಾಗೂ ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷ ಚಂದ್ರಪ್ಪ ಉಪಸ್ಥಿತರಿದ್ದರು.