ವಾಹನಗಳ ನೋಂದಣಿ ಫಲಕ ಅಳವಡಿಸಲು ಅವಧಿ ವಿಸ್ತರಣೆ

ದಾವಣಗೆರೆ, ಫೆ.4-  ರಾಜ್ಯ ಸರ್ಕಾರದ ಅಧಿಸೂಚನೆ  ಪ್ರಕಾರ,  1ನೇ ಏಪ್ರಿಲ್ 2019 ಕ್ಕಿಂತ ಮೊದಲು ನೋಂದಾಯಿ ಸಲ್ಪಟ್ಟ   ಎಲ್ಲಾ  ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನಗಳು, ಪ್ರಯಾಣಿಕ ಕಾರುಗಳು, ಮಧ್ಯಮ ಮತ್ತು ಭಾರೀ ವಾಣಿಜ್ಯ ವಾಹನಗಳು, ಟ್ರೈಲರ್, ಟ್ರಾಕ್ಟರ್  ಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕಗಳನ್ನು (ಹೆಚ್‍ಎಸ್‍ಆ ರ್‍ಪಿ) ಅಳವಡಿಸುವುದು ಕಡ್ಡಾಯವಾಗಿದೆ. ಹೆಚ್‌ಎಸ್ಆರ್‌ಪಿ  ಅಳವಡಿಕೆಗೆ ಇದೇ ದಿನಾಂಕ 17-02-2024 ರವರೆಗೆ ಅವಧಿ ವಿಸ್ತರಿಸಲಾಗಿರುತ್ತದೆ.  ಸಾರ್ವಜನಿಕರು ಆನ್ ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ಕೆಳಕಂ ಡ ದೂರವಾಣಿ ಸಂಖ್ಯೆಗಳ ಮೂಲಕ ಸಹಾಯವಾಣಿಯನ್ನು  ಸಂಪರ್ಕಿಸಬಹುದಾಗಿದೆ. (94498 63429,  944 98 63426)  ಎಂದು ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.

error: Content is protected !!