ತೊಟ್ಟಿಲು ತೂಗುವ ಕೈ ದೇಶ ಮುನ್ನಡೆಸಬಲ್ಲದು

ತೊಟ್ಟಿಲು ತೂಗುವ ಕೈ ದೇಶ ಮುನ್ನಡೆಸಬಲ್ಲದು

ಹೊಲಿಗೆ ಯಂತ್ರಗಳ  ವಿತರಣಾ ಕಾರ್ಯಕ್ರಮದಲ್ಲಿ ಗಾಯತ್ರಿ ಸಿದ್ದೇಶ್ವರ

ದಾವಣಗೆರೆ, ಫೆ. 4 –  ನಗರದ ಮಾರ್ಕಂಡೇಶ್ವರ ಭವನದಲ್ಲಿ  ಸಮುದಾಯದ ಅಶಕ್ತ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗಾಯತ್ರಿ ಸಿದ್ದೇಶ್ವರ ಅವರು ಮಹಿಳೆಯರ ಸಬಲೀಕರಣ ಇಂದಿನ ದಿನಮಾನಗಳಲ್ಲಿ ಪ್ರಥಮ ಆದ್ಯತೆಯಾಗಬೇಕು. ತೊಟ್ಟಿಲು ತೂಗುವ ಕೈ ದೇಶವನ್ನು ಮುನ್ನಡೆಸಬಲ್ಲದು ಎನ್ನುವುದು  ಅನೇಕ ಸಂದರ್ಭಗಳಲ್ಲಿ  ಸಾಬೀತಾಗಿದೆ. ದೇಶದ ಅಭಿವೃದ್ದಿ ವಿಚಾರದಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಹಿಳೆಯರು ಹಿಂಜರಿಯದೇ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರೆಯಬೇಕು ಎಂದು ಕರೆ
ನೀಡಿದರು.

ಪ್ರಸ್ತುತ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿರುವುದು ಮಹಿಳೆಯರಾದ ನಮಗೆಲ್ಲರಿಗೂ ಗೌರವ ತರುವ ಸಂಗತಿಯಾಗಿದೆ. ಮಹಿಳೆಯರು ಹಣವನ್ನು ಉಳಿತಾಯ ಮಾಡುವ ಕಲೆಯನ್ನು ಕಲಿತುಕೊಳ್ಳಬೇಕು. ರಾಜ್ಯದಲ್ಲಿ ಧರ್ಮಸ್ಥಳದ ಮಂಜುನಾಥೇಶ್ವರ ಸಂಘದವರು ಮಹಿಳೆಯ ಸಬಲೀಕರಣಕ್ಕಾಗಿ ಸಾಕಷ್ಟು ನೆರವು ನೀಡುತ್ತಾ ಬಂದಿದ್ದಾರೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಗಾಯತ್ರಿ ಸಿದ್ದೇಶ್ವರ ಕರೆ ನೀಡಿದರು.  

ಈ ಸಂದರ್ಭದಲ್ಲಿ ಮಾಜಿ  ಅಧ್ಯಕ್ಷ  ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಪ್ರೇಮಾ ನಟರಾಜ್,   ಗಾಯತ್ರಿ ಸುಭಾಶ್‍ಚಂದ್ರ,   ನಾಗಪ್ಪ,   ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಭಾಗ್ಯ ಪಿಸಾಳೆ, ಬಾಲು ಇತರರು ಉಪಸ್ಥಿತರಿದ್ದರು. 

error: Content is protected !!