ದಾವಣಗೆರೆ – ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಕಲಾಕೇಂದ್ರ ತನ್ನ ಸಂಸ್ಥೆಯ 64ನೇ ವಾರ್ಷಿಕ ಮಹೋತ್ಸವವನ್ನು ಇಂದು ಸಂಜೆ 6:30ಕ್ಕೆ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟಕ ರಾಗಿ ಎಸ್.ಎಸ್. ಕೇರ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾ ರ್ಜುನ್ ಆಗಮಿ ಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಆಗಮಿಸ ಲಿದ್ದು, ಕಾರ್ಯಕ್ರಮದ ಅಧ್ಯ ಕ್ಷತೆಯನ್ನು ವಿದುಷಿ ರಜನಿ ರಘು ನಾಥ್ ಕುಲಕರ್ಣಿ ವಹಿಸಲಿದ್ದಾರೆ. 2023ನೇ ಸಾಲಿನ ಜನವರಿ ತಿಂಗಳಿನಲ್ಲಿ ನಡೆದ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯು ತ್ತಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವಿದ್ದು, ಕಲಾಕೇಂದ್ರದ ವಿದ್ಯಾರ್ಥಿಗಳಿಂದ ನೇಗಿಲಯೋಗಿ ಎಂಬ ವಿಶೇಷ ನೃತ್ಯ ರೂಪಕ ಪ್ರದರ್ಶನವಿದೆ.
January 11, 2025