ಹೊನ್ನಾಳಿ, ಫೆ. 1- ಪಟ್ಟಣದ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಡಾ.ಎಚ್.ಪಿ.ರಾಜಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎಚ್.ವೀರೇಶಪ್ಪ ಅವಿರೋಧವಾಗಿ ಆಯ್ಕೆಯಾದರು.
ಸೊಸೈಟಿ ಕಚೇರಿಯಲ್ಲಿ ಗುರುವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿ ನವೀನ್ಕುಮಾರ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಸೊಸೈಟಿ ನಿರ್ದೇಶಕರುಗಳಾದ ಎನ್.ಜಯರಾವ್, ಜಿ.ಆರ್.ಪ್ರಕಾಶ್, ಎಚ್.ಬಿ.ಮೋಹನ್, ಎಚ್.ಎಂ.ಅರುಣ್ಕುಮಾರ್, ಬಿ.ಎಚ್.ಉಮೇಶ್, ಕೆ.ಆರ್.ನಾಗರಾಜ್, ಎಚ್.ಎಂ.ಶಿವಮೂರ್ತಿ, ಸಿ.ಕೆ.ರವಿಕುಮಾರ್, ಎನ್.ಎನ್.ನಾಗರತ್ನ, ಎಚ್.ಕೆ.ರೂಪ, ಡಿ.ಎನ್.ಶಾಂತಲಾ, ಡಾ.ರಾಜಾನಾಯ್ಕ, ಎನ್.ಪ್ರಸಾದ್, ಕಾರ್ಯದರ್ಶಿ ಕುಮಾರ್ ಇದ್ದರು.