ಮಲೇಬೆನ್ನೂರು, ಫೆ. 1 – ವಿನಾಯಕ ನಗರ ಕ್ಯಾಂಪಿನ (ಜಿಗಳಿ ಕ್ಯಾಂಪ್) ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಟಿ. ಭಾಸ್ಕರ್ ರಾವ್ ಹಾಗೂ ಉಪಾಧ್ಯಕ್ಷರಾಗಿ ಹೆಚ್. ಪಿ ಹನುಮಂತಪ್ಪ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ಕೆ. ಜಬಿವುಲ್ಲಾ ಕಾರ್ಯನಿರ್ವಹಿಸಿದರು. ಸಂಘದ ನಿರ್ದೇಶಕ ಎನ್. ಪ್ರಸಾದ್ ರಾವ್, ಎನ್. ಸತ್ಯನಾರಾಯಣ, ಕೆ.ಎನ್. ವೀರಭದ್ರಪ್ಪ, ಜಿ. ಹನುಮಂತಪ್ಪ, ಸೀತಾರಾಮು, ಬಸವಣ್ಯಪ್ಪ, ಶ್ರೀಮತಿ ರತ್ನಮ್ಮ, ಶ್ರೀಮತಿ ದ್ಯಾಮವ್ವ, ವೆಂಕಟನಾರಾಯಣ ಮತ್ತು ಸಂಘದ ಮುಖ್ಯಕಾರ್ಯನಿರ್ವಾಹಕ ಡಿ.ಪಿ. ಚಿದಾನಂದ್ ಈ ವೇಳೆ ಹಾಜರಿದ್ದರು.
January 11, 2025