ಸಿರಿಗೆರೆ-ಧೂಳೆಹೊಳೆ ರಸ್ತೆ ಡಾಂಬರೀಕರಣ

ಸಿರಿಗೆರೆ-ಧೂಳೆಹೊಳೆ ರಸ್ತೆ ಡಾಂಬರೀಕರಣ

ಮಲೇಬೆನ್ನೂರು, ಜ. 29 – ಹಲವಾರು ವರ್ಷಗಳ ಅಭಿವೃದ್ಧಿ ಕಾಣದೇ ನೆನಗುದಿಗೆ ಬಿದ್ದಿದ್ದ ಮಲೇಬೆನ್ನೂರಿನಿಂದ ಜಿಗಳಿ-ಯಲವಟ್ಟಿ- ಹೊಳೆಸಿರಿ ಗೆರೆ ಮಾರ್ಗವಾಗಿ-ಧೂಳೆಹೊಳೆ ತಲುಪುವ ಜಿಲ್ಲಾ ಮುಖ್ಯ ರಸ್ತೆಗೆ ಇದೀಗ ಅಭಿವೃದ್ಧಿಯ ಭಾಗ್ಯ ಲಭಿಸಿದೆ. ಮಲೇಬೆನ್ನೂರಿನಿಂದ ಜಿಗಳಿ ಸಮೀಪದವ ರೆಗಿನ 3 ಕಿ.ಮೀ. ರಸ್ತೆ, ಅಭಿವೃದ್ಧಿ ಕಾಮಗಾರಿಗೆ ಎಸ್‌.ರಾಮಪ್ಪ ಅವರು ಶಾಸಕರಾಗಿದ್ದಾಗ ಚಾಲನೆ ನೀಡಿದ್ದರು.

ಚಾಲನೆ ನೀಡಿ 2 ವರ್ಷ ಸಮೀಪಸುತ್ತಿದ್ದರೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದಾಗಿ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವುದು ಜಿಗಳಿ ಸೇರಿದಂತೆ ಈ ಮಾರ್ಗದ ವಾಹನ ಸವಾರರಿಗೆ ತೀವ್ರ ಬೇಸರ ತಂದಿತ್ತು.

ಜಿಗಳಿಯ ಮಲೇಬೆನ್ನೂರು ಕಡೆಗಿನ 1 ಕಿ.ಮೀ. ರಸ್ತೆ ಸೇರಿದಂತೆ ಜಿಗಳಿ ಊರೊಳಗಿನ ರಸ್ತೆ ಮತ್ತು ಯಲವಟ್ಟಿಯಿಂದ ಸಿರಿಗೆರೆ ಕ್ರಾಸ್‌ವರೆಗಿನ ರಸ್ತೆ ಹಾಗೂ ಹೊಳೆಸಿರಿಗೆರೆಯಿಂದ ಧೂಳೆಹೊಳೆ ಗ್ರಾಮದ ವರೆಗಿನ ರಸ್ತೆ ಅಭಿವೃದ್ಧಿಗೊಂಡು ಇದೀಗ ಡಾಂಬರೀಕರಣಗೊಳ್ಳುತ್ತಿರುವುದು ಈ ಭಾಗದ ಜನತೆಗೆ ಸಂತಸ ತಂದಿದೆ.

ಗ್ರಾಮಗಳ ಒಳಗಡೆ 18 ಅಡಿ ರಸ್ತೆಗೆ ಡಾಂಬರೀಕರಣ ಮತ್ತು ಧೂಳೆಹೊಳೆ ರಸ್ತೆಗೆ 12 ಅಡಿ ಅಗಲ ಡಾಂಬರೀಕರಣ ಹಾಗೂ ಸಿರಿಗೆರೆ ಕ್ರಾಸ್‌ನಿಂದ ಮಲೇಬೆನ್ನೂರುವರೆಗೆ 18 ಅಡಿ ಅಗಲದ ರಸ್ತೆಗೆ ಡಾಂಬರೀಕರಣ ಮಾಡಲಾಗುವುದೆಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ ಬಿ.ಜಿ.ಶಿವರುದ್ರಪ್ಪ ಅವರು `ಜನತಾವಾಣಿ’ಗೆ ತಿಳಿಸಿದರು.

error: Content is protected !!