ಡೇ ನಲ್ಮ್ ಯೋಜನೆಯಡಿ ಪದವೀಧರ ವಿದ್ಯಾರ್ಥಿಗಳಿಗೆ ಅರ್ಬನ್ ಲರ್ನಿಂಗ್ ಇಂಟರ್‍ಶಿಪ್ ಪ್ರೋಗ್ರಾಮ್

ದಾವಣಗೆರೆ, ಜ.29- ಮಹಾನಗರ ಪಾಲಿಕೆ ದಾವಣಗೆರೆ ಡೇ-ನಲ್ಮ್ ಅಭಿಯಾನ ಮತ್ತು ಪಿ.ಎಂ. ಸ್ವ-ನಿಧಿ ಯೋಜನೆಯಡಿ ದಿ ಅರ್ಬನ್ ಲರ್ನಿಂಗ್ ಇಂಟರ್‍ಶಿಪ್ ಪ್ರೋಗ್ರಾಮ್ ಕಾರ್ಯಕ್ರಮಕ್ಕಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಬರುವಂತಹ ಯಾವುದಾದರೂ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಹತೆ ಹೊಂದಿದ ಇಚ್ಛೆಯುಳ್ಳ ಅಭ್ಯರ್ಥಿಗಳಿಗೆ ನಲ್ಮ್ ಯೋಜನೆ ಹಾಗೂ ಪಿ ಎಂ ಸ್ವ-ನಿಧಿ ಯೋಜನೆಯ ಬೀದಿ ಬದಿ ವ್ಯಾಪರಿಗಳ ಕುರಿತು ಅಧ್ಯಯನ ಮಾಡಿ ಜ್ಞಾನ ಮತ್ತು ಕೌಶಲ್ಯ ವೃದ್ಧಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಇಂಟರ್‍ನ್‍ಶಿಪ್ ಅವಧಿಯಲ್ಲಿ ಶಿಷ್ಯ ವೇತನವನ್ನು ಮಾರ್ಗಸೂಚಿ ಯನುಸಾರ ನೀಡಲಾಗುವುದು.  https://internship.aictrindia.org/module ulb/workspace.php?uid=INTERNSHIP GOVNULM_170609750565bofb0fb61e5bac ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೆಂಪು ಕಟ್ಟಡ ಮಹಾನಗರ ಪಾಲಿಕೆಯ ಡೇ-ನಲ್ಮ್ ಶಾಖೆ ದಾವಣಗೆರೆ ಸಂಪರ್ಕಿಸಲು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕಾ ತಿಳಿಸಿದ್ದಾರೆ.

error: Content is protected !!