ಕರುಣಾ ಟ್ರಸ್ಟ್‌ನಲ್ಲಿ ಸೈಕಲ್ ವಿತರಣೆ

ಕರುಣಾ ಟ್ರಸ್ಟ್‌ನಲ್ಲಿ ಸೈಕಲ್ ವಿತರಣೆ

 ದಾವಣಗೆರೆ, ಜ.28- ಕರುಣಾ ಜೀವ ಕಲ್ಯಾಣ ಟ್ರಸ್ಟ್ ನಲ್ಲಿ ಬಡತನ ನಿರ್ಮೂಲನೆಗಾಗಿ 100 ಸೈಕಲ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 

ಟ್ರಸ್ಟಿನ ದಾನಿಗಳಾದ ಪ್ರೊ. ಪಾಳೇಗಾರ್ ನಿರ್ಮಲ ಡಾ. ಕರಿಬಸಪ್ಪ 100 ಸೈಕಲ್ ವಿತರಿಸುವುದರ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಫಲಾನುಭವಿಗಳಾದ ತಿಪ್ಪೇಸ್ವಾಮಿ ಮತ್ತು ಸುಮಾ ಸೈಕಲ್ ಉಪಯೋಗಗಳ ಬಗ್ಗೆ ಅನಿಸಿಕೆ ಹಂಚಿಕೊಂಡರು.

ನಮ್ಮ ರಾಜ್ಯದಲ್ಲಿ 25 ವರ್ಷದೊಳಗಿನವರಿಗೆ ಸೈಕಲ್ ಬಳಕೆ ಕಡ್ಡಾಯವಾಗಬೇಕು ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯ ವ್ಯಕ್ತ ಪಡಿಸಿದರು. ಸೈಕಲ್‌ಗಳನ್ನು ಉತ್ತಮವಾಗಿ ಬಳಸಿ, ಪರಿಸರ ಜಾಗೃತಿ ಮೂಡಿಸಿ ಎಂದು ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ  ಮಂಜುಳಾ ಬಸವಲಿಂಗಪ್ಪ, ಬಸವರಾಜ್ ಒಡೆಯರ್, ಎಂ. ಬಸವರಾಜ್,  ಮಧುಸೂದನ್, ಮಲ್ಲಾಬಾದಿ ಬಸವರಾಜ್  , ಜಯ್ಯಣ್ಣ, ಮುಂತಾದವರಿದ್ದರು.

error: Content is protected !!