ಬಿಎಸ್‌ಸಿ ನವೀಕೃತ ಶೋರೂಂ ಉದ್ಘಾಟಿಸಿದ ನಟ ವಿನಯ್ ರಾಜ್‌ಕುಮಾರ್‌

ಬಿಎಸ್‌ಸಿ ನವೀಕೃತ ಶೋರೂಂ ಉದ್ಘಾಟಿಸಿದ ನಟ ವಿನಯ್ ರಾಜ್‌ಕುಮಾರ್‌

ದಾವಣಗೆರೆ, ಜ. 28- ನಗರದ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್‌ ಅಂಗಡಿಯ ಪುರುಷರ ಉಡುಪುಗಳ ನವೀಕೃತ ಶಾಖೆಯ ಉದ್ಘಾಟನೆ ಹಾಗೂ 11ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಚಿತ್ರನಟ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್ ಕುಮಾರ್ ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರೊಂದಿಗೆ ಶಾಮನೂರು ಆಂಜನೇಯ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು, ನಂತರ ಪುನೀತ್ ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಾಯಿಪೇಟೆಯಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ  ಸಲ್ಲಿಸಿದರು.

ಬಿ.ಎಸ್. ಚನ್ನಬಸಪ್ಪ ಅಂಗಡಿಯಲ್ಲಿ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ತಾವು ನಟಿಸಿರುವ `ಒಂದು ಸರಳ ಪ್ರೇಮಕಥೆ’ ಚಿತ್ರವು ಇದೇ ಫೆ.8ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿರುವುದಾಗಿ ಹೇಳಿದರು. ಮೂರು ವರ್ಷಗಳ ನಂತರ ನನ್ನ ನಾಲ್ಕನೇ ಚಿತ್ರ ಬಿಡುಡೆಯಾಗುತ್ತಿದೆ. ಹುಬ್ಬಳ್ಳಿ,  ಬೆಳಗಾವಿಗಳಲ್ಲಿ ಚಿತ್ರದ ಬಗ್ಗೆ ಪ್ರಚಾರ ನಡೆಸಿದ್ದು, ಇದೀಗ ದಾವಣಗೆೆರೆ ಆಗಮಿಸಿರುವುದಾಗಿ ಅವರು ಹೇಳಿದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ಪ್ರೇಮಕಥೆ, ಹಾಸ್ಯ ಇರುವ ಇದು ಕೌಟುಂಬಿಕ ಚಿತ್ರವಾಗಿದೆ. ವಿನಯ್ ರಾಜ್ ಕುಮಾರ್ ಜೊತೆ `ರಾಧಾ ಕೃಷ್ಣ’ ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್  ಮತ್ತು ಸ್ವಾತಿಷ್ಟ ಕೃಷ್ಣನ್ ಮುಖ್ಯ ಭೂಮಿಕೆಯಲ್ಲಿದ್ದಾರೆ ಮತ್ತು ಸಾಧು ಕೋಕಿಲ, ರಾಜೇಶ್ ನಟರಂಗ, ಅರುಣ್ ಬಾಲರಾಜ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದರು. ಸಂಗೀತದ ಆಸಕ್ತಿಯುಳ್ಳ ನಿರುದ್ಯೋಗ ಯುವಕನೊಬ್ಬನ ಪ್ರೇಮಕಥೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಚಿತ್ರದಲ್ಲಿ ಹತ್ತು ಹಾಡುಗಳಿವೆ. 

ಅರ್ಮಾನ್ ಮಲ್ಲಿಕ್, ಕೇಶವಾನಂದ, ಬೀದರ್‌ನ ಶಿವಾನಿ ಸೇರಿದಂತೆ ಹಲವಾರು ಯುವ ಗಾಯಕರು ಚಿತ್ರದಲ್ಲಿ ಹಾಡಿದ್ದಾರೆ ಇದೊಂದು ಸಂಗೀತಮಯ ಪ್ರೇಮ ಚಿತ್ರವೂ ಹೌದು ಎಂದರು.

ಬಿಎಸ್‌ಸಿಯ ಬಿ.ಸಿ. ಚಂದ್ರಶೇಖರ್ ಮಾತನಾಡಿ, ನಟ ವಿನಯ್ ರಾಜ್ ಕುಮಾರ್ ಆಗಮಿಸಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾ, ಅವರ ಅಭಿನಯದ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಚಿತ್ರದ ನಿರ್ಮಾಪಕ ರಮೇಶ್, ಜಾನ್ ಮಂಜು, ಬಿಎಸ್‌ಸಿಯ ಬಿ.ಎಸ್. ಮೃಣಾಲ್ ಇತರರು ಉಪಸ್ಥಿತರಿದ್ದರು.

error: Content is protected !!