ಮಲೇಬೆನ್ನೂರು : ನಾಡ ಕಛೇರಿಯ ನೂತನ ಕಟ್ಟಡ ಉದ್ಘಾಟನೆ

ಮಲೇಬೆನ್ನೂರು : ನಾಡ ಕಛೇರಿಯ ನೂತನ ಕಟ್ಟಡ ಉದ್ಘಾಟನೆ

ಮಲೇಬೆನ್ನೂರು, ಜ. 24- ಪಟ್ಟಣದ ರೈತ ಸಂಪರ್ಕ ಕೇಂದ್ರದ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಿರುವ ನಾಡ ಕಛೇರಿ ಕಟ್ಟಡವನ್ನು ಶಾಸಕ ಬಿ.ಪಿ. ಹರೀಶ್ ಬುಧವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಹರೀಶ್ ಅವರು, ನಾಡ ಕಛೇರಿಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಜನರಿಗೆ ಇನ್ನಷ್ಟು ತ್ವರಿತ ಗತಿಯಲ್ಲಿ  ಸೇವೆಗಳನ್ನು ಒದಗಿಸುವಂತೆ ಮತ್ತು ಮಧ್ಯವರ್ತಿಗಳಿಗೆ ಅವಕಾಶ ನೀಡದಿರಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

ಉಪ ತಹಶೀಲ್ದಾರ್ ಆರ್. ರವಿ  ಮಾತನಾಡಿ, ಈ ಕಟ್ಟಡವನ್ನು ಅಟಲ್‌ಜೀ ಜನಸ್ನೇಹಿ ಕೇಂದ್ರ ನಿರ್ದೇಶನಾಲಯದ ಅನುದಾನದಡಿ 18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿತಿ ಕೇಂದ್ರದಿಂದ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ತಹಶೀಲ್ದಾರ್ ಗುರು ಬಸವರಾಜ್, ಪುರಸಭೆಯ ಮುಖ್ಯಾಧಿಕಾರಿ ಎ. ಸುರೇಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿಗಳಾದ ಅಣ್ಣಪ್ಪ, ಕೊಟ್ರೇಶ್, ಶ್ರೀಧರ್, ಬೋರಯ್ಯ, ಷರೀಫ್,  ಆನಂದತೀರ್ಥ, ದೊಡ್ಡಬಸವರಾಜ್, ಸೌಮ್ಯ, ಶಿಲ್ಪಾ, ನವೀನ್, ಮಂಜುಳಾ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್, ಪುರಸಭೆ ಸದಸ್ಯರಾದ ಖಲೀಲ್, ನಯಾಜ್, ಬೆಣ್ಣೆಹಳ್ಳಿ ಸಿದ್ದೇಶ್, ಭೋವಿಕುಮಾರ್, ಚಮನ್ ಷಾ, ಗೌಡ್ರ ಮಂಜಣ್ಣ, ಬಿ. ಮಂಜುನಾಥ್, ಬಿ. ಸುರೇಶ್, ಪಿ.ಆರ್. ರಾಜು, ತಾ.ಪಂ. ಮಾಜಿ ಅಧ್ಯಕ್ಷ ಐರಣಿ ಅಣ್ಣಪ್ಪ, ಬೆಣ್ಣೆಹಳ್ಳಿ ಬಸವರಾಜ್, ಭೋವಿ ಮಂಜಣ್ಣ, ಜಿಗಳಿ ಹನುಮಗೌಡ, ನಿರ್ಮಿತಿ ಕೇಂದ್ರದ ರಾಮಲಿಂಗಪ್ಪ, ಕೊಟ್ರೇಶ್, ಜಿಲ್ಲಾ ಸಕಾಲ ಸಂಯೋಜಕ ವಿನಯ್, ನಾಡಕಛೇರಿ ಪುಷ್ಪಾ ಹಿರೇಮಠ್, ಶಿಲ್ಪಾ, ಬಸವರಾಜ್, ಗ್ರಾಮ ಸಹಾಯಕರಾದ ಪೋಸ್ಟ್ ಮಾರುತಿ, ಜಿಗಳಿ ರಂಗಸ್ವಾಮಿ, ಮಂಜಮ್ಮ, ಚಂದ್ರಮ್ಮ, ಶಶಿಕುಮಾರ್, ರಾಮಪ್ಪ, ಸುಜಾತ, ರಾಜಪ್ಪ, ಉಕ್ಕಡಗಾತ್ರಿ ರಾಜ, ನಂದ್ಯಪ್ಪ, ಚನ್ನಪ್ಪ, ಹನುಮಂತಪ್ಪ ಮತ್ತಿತರರು ಹಾಜರಿದ್ದರು.

error: Content is protected !!