ದೇವರಬೆಳಕೆರೆಯಲ್ಲಿ ಇಂದು ಹುಣ್ಣಿಮೆ

ದೇವರಬೆಳಕೆರೆಯಲ್ಲಿ ಇಂದು ಹುಣ್ಣಿಮೆ

ಹರಿಹರ ತಾಲ್ಲೂಕು ದೇವರಬೆಳಕೆರೆ ಗ್ರಾಮದ ಶ್ರೀ ಮೈಲಾರ ಲಿಂಗೇಶ್ವರ ಸ್ವಾಮಿ ಭಂಡಾರದ ಹುಣ್ಣಿಮೆ ಮತ್ತು ಭಂಡಾರ ಹಣಿಯುವ ಕಾರ್ಯಕ್ರಮ ಇಂದು ಸಂಜೆ 7.30 ರಿಂದ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ. ರಾತ್ರಿ 8.30 ರಿಂದ ಶ್ರೀ ಸ್ವಾಮಿ  ಪಲ್ಲಕ್ಕಿ ಉತ್ಸವ ಗ್ರಾಮದ ರಾಜಬೀದಿಗಳಲ್ಲಿ ಜರುಗಲಿದೆ. ನಾಳೆ ಶುಕ್ರವಾರ ಸಂಜೆ 7 ಗಂಟೆಗೆ ಭಂಡಾರ ಅಳೆಯುವುದು ಮತ್ತು ಪ್ರಸಾದ ವಿತರಣೆ ನಡೆಯಲಿದೆ.  

error: Content is protected !!