ಅಂತರ್‍ಲ್‌ಜಿಲ್ಲಾ ಕಳ್ಳರ ಬಂಧನ

ಅಂತರ್‍ಲ್‌ಜಿಲ್ಲಾ  ಕಳ್ಳರ ಬಂಧನ

ದಾವಣಗೆರೆ, ಜ. 24- ಜಗಳೂರು ಪೊಲೀಸ್ ಠಾಣೆಯಲ್ಲಿ ಮನೆಕಳ್ಳತನ ನಡೆದಿದ್ದ ಬಗ್ಗೆ ದೂರು ದಾಖಲಿಸಿಕೊಡು ತನಿಖೆ ನಡೆಸಿದ್ದ ಪೊಲೀಸರು ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ಬಂಧಿಸಿದ್ದಾರೆ.

2022ರ ನ.3ರಂದು ಜಗಳೂರು ಪಟ್ಟಣದ ಮಂಜುನಾಥ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದ ಬಗ್ಗೆ ಜಗಳೂರು ಠಾಣೆಯಲ್ಲಿ ದೂರು ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಮಂಜು ಎಂಬಾತನನ್ನು ಬಂಧಿಸಿ, ಈತನಿಂದ ಜಗಳೂರು ಠಾಣೆಗೆ ಸಂಬಂಧಿಸಿದ 1 ಪ್ರಕರಣ, ಚಿತ್ರದುರ್ಗದ ನಗರದ ಬಡಾವಣೆ ಹಾಗೂ ಕೋಟೆ ಪೊಲೀಸ್ ಠಾಣೆಯ 2 ಪ್ರಕರಣಗಳು ಹಾಗೂ ಚಿಕ್ಕಮಗಳೂರು ಟೌನ್ ಠಾಣೆಯ 1 ಪ್ರಕರಣ ಪತ್ತೆ ಮಾಡಿ ಒಟ್ಟು 25,18,500 ರೂ. ಮೌಲ್ಯದ 503.8 ಗ್ರಾಂ ಬಂಗಾರದ ಆಭಣ ವಶಪಡಿಸಿಕೊಂಡಿದ್ದಾರೆ.

ತಲೆ ಮರೆಸಿಕೊಂಡಿದ್ದ ಮತ್ತೋರ್ವ ಆರೋಪಿ ಚನ್ನರಾಯಪಟ್ಟಣದ ಗಾಯತ್ರಿ ಬಡಾವಣೆಯಲ್ಲಿ ಪಂಚರ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಅಯ್ಯಪ್ಪ (41) ಈತನನ್ನು 2024ರ ಜ.21ರಂದು ಬಂಧಿಸಿ ಈತನಿಂದ ಜಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾದ  ಪ್ರಕರಣಕ್ಕೆ ಸಂಬಂಧಿಸಿದ 4,74,600 ರೂ ಮೌಲ್ಯದ 6 ಕೆ.ಜಿ 328 ಗ್ರಾಂ ಬೆಳ್ಳಿ ಆಭರಣಗಳು. ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದ 1,63,000  ರೂ. ಬೆಲೆಬಾಳುವ 29ಗ್ರಾಂ. 190 ಮಿಲಿ ತೂಕದ ಬಂಗಾರದ ನೆಕ್ಲೇಸನ್ನು ವಶಪಡಿಸಿಕೊಳ್ಳಲಾಗಿದೆ. ಜಗಳೂರು ಠಾಣೆಯ ಪಿಐ ಶ್ರೀನಿವಾಸರಾವ್ ನೇತೃತ್ವದಲ್ಲಿ ಪಿಎಸ್‍ಐ ಸಾಗರ್ ಹಾಗೂ ಅಪರಾಧ ಪತ್ತೆ ದಳದ ಸಿಬ್ಬಂದಿ ನಾಗಭೂಷಣ, ಬಸವರಾಜ್, ಹನುಮಂತಪ್ಪ ಕವಾಡಿರವರನ್ನು ಒಳಗೊಂಡ ತಂಡವು ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದೆ.

10 ಮೊಬೈಲ್‌ಗಳು ಪತ್ತೆ:  ಜಗಳೂರು ಪೊಲೀಸ್  ಠಾಣೆಯಲ್ಲಿ ಸಿಇಐಆರ್ ಪೋರ್ಟಲ್ ಸಹಾಯದಿಂದ 1,59,500  ರೂ. ಬೆಲೆಬಾಳುವ 10 ಆಂಡ್ರಾಯಿಡ್ ಮೊಬೈಲ್‍ಗಳನ್ನು ಪತ್ತೆ ಮಾಡಲಾಗಿದೆ.

error: Content is protected !!