ಅಕ್ರಮ ಕಸಾಯಿಖಾನೆ ತೆರವಿಗೆ ಹಿಂಜಾವೇ ಮನವಿ

ಅಕ್ರಮ ಕಸಾಯಿಖಾನೆ ತೆರವಿಗೆ ಹಿಂಜಾವೇ ಮನವಿ

ದಾವಣಗೆರೆ, ಜ. 24 – ನಗರದಲ್ಲಿರುವ ಅಕ್ರಮ ಕಸಾಯಿ ಖಾನೆಗಳ ತೆರವುಗೊಳಿಸುವಂತೆ ಒತ್ತಾಯಿಸಿ, ಹಿಂದೂ ಜಾಗರಣ ವೇದಿಕೆಯಿಂದ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.

ನಗರದಲ್ಲಿ ನಗರಪಾಲಿಕೆಯ ವ್ಯಾಪ್ತಿಗೆ ಬರುವ ಕೆಟಿಜೆ ನಗರ, ಆಜಾದ್‌ನಗರ, ಬಾಷಾನಗರ, ಶಿವನಗರ, ಅಮರಪ್ಪನತೋಟ, ಮುಂತಾದ ಕಡೆಗಳಲ್ಲಿ ಅಕ್ರಮ ಕಸಾಯಿಖಾನೆಗಳಿದ್ದು, ಇವುಗಳೆಲ್ಲವು ಅಕ್ರಮವಾಗಿಯೇ ನಡೆಯುತ್ತಿದ್ದು ಮತ್ತು ನಗರಪಾಲಿಕೆಯ ವ್ಯಾಪ್ತಿಯಲ್ಲಿರುವುದರಿಂದ ಮುನ್ಸಿಪಾಲ್ ಆಕ್ಟ್ ಪ್ರಕಾರ ಅವರುಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಕಾನೂನು ಪಾಲನೆ ಮಾಡಬೇಕೆಂದು ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು‌.

ಅಕ್ರಮ ಕಸಾಯಿಖಾನೆ ತೆರವುಗೊಳಿಸುವ ತನಕ ರಾಮಮೂರ್ತಿಯ ಪ್ರತಿಷ್ಠಾಪನೆಯ ಸಲುವಾಗಿ ಕಟ್ಟಿರುವ ಬಂಟಿಂಗ್ಸ್ ಮತ್ತು ಬ್ಯಾನರ್‌ಗಳನ್ನು ತೆಗೆಯಬಾರದೆಂದು ಇಡೀ ಹಿಂದೂ ಸಮಾಜ ನಿರ್ಧಾರ ಮಾಡಿದೆ. 

ಒಂದು ವಾರದೊಳಗೆ ಅಕ್ರಮ ಕಸಾಯಿಖಾನೆಗಳನ್ನು ತೆರವುಗೊಳಿಸಿ, ಹಿಂದೂ ಧಾರ್ಮಿಕ ಭಾವನೆಗೆ ದಕ್ಕೆ ತರದಂತೆ
ಕ್ರಮ ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಾಲಿಕೆಯ ಆಯುಕ್ತರ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಪ್ರಾಂತ ಸಂಚಾಲಕ ಸತೀಶ್ ಪೂಜಾರಿ, ಎಂ. ವೀರೇಶ್, ಎನ್.‌ನವೀನ್, ಎಲ್.‌ಚೇತನ್, ಶ್ರೀನಿವಾಸ್, ಅಣ್ಣಪ್ಪ, ಮನೋಜ್, ಅಭಿಷೇಕ್, ಅನೀಲ್, ನಾಗರಾಜ್, ರಾಹುಲ್ ಮತ್ತಿತರರು ಇದ್ದರು.

error: Content is protected !!