ನಗರಸಭೆ ಬೋಗಸ್‌ ಬಿಲ್‌ ಪ್ರಕರಣ ಲೋಕಾಯುಕ್ತ ಎಇಇ ಪರಿಶೀಲನೆ

ನಗರಸಭೆ ಬೋಗಸ್‌ ಬಿಲ್‌ ಪ್ರಕರಣ ಲೋಕಾಯುಕ್ತ ಎಇಇ ಪರಿಶೀಲನೆ

ಹರಿಹರ, ಜ.24- ಕಾಮಗಾರಿಗಳಿಗೆ ಹೆಚ್ಚಿನ ಬಿಲ್ ಹಾಗೂ ಬೋಗಸ್ ಬಿಲ್ ಪಾವತಿ ಸೇರಿದಂತೆ ನಗರಸಭೆ ವಿರುದ್ಧ ದಾಖಲಾಗಿರುವ ವಿವಿಧ ಆರೋಪಗಳ ಕುರಿತು ಲೋಕಾಯುಕ್ತ ಎಇಇ ನಗರದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದರು.

ಗುತ್ತಿಗೆದಾರ ಮೊಹ್ಮದ್ ಮಜಹರ್ ಇವರು 2018-19ನೇ ಸಾಲಿನ ಸಾಮಾನ್ಯ ನಿಧಿಯಡಿ  ಕುಡಿಯುವ ನೀರಿನ ಪೈಪ್‍ಲೈನ್ ಹಾಗೂ ಸಿವಿಲ್ ಒಟ್ಟು ರೂ.44.50 ಲಕ್ಷ ಮೊತ್ತದ 19 ಕಾಮಗಾರಿಗಳ ಕುರಿತು ದೂರು ಸಲ್ಲಿಸಿದ್ದರನ್ವಯ ಲೋಕಾಯುಕ್ತ ಎಇಇ ಯೋಗೇಶ್‌. ಎಂ. ಇವರು ಇಂದು ಪರಿಶೀಲನೆ ನಡೆಸಿದರು.

ಈ ಎಲ್ಲಾ ಕಾಮಗಾರಿಗಳನ್ನು ಗುತ್ತಿಗೆದಾರ ಎಚ್.ಎಸ್.ಸುಭಾಷ್ ಅವರಿಗೆ ಟೆಂಡರ್ ಆಗಿತ್ತು. ಇದರಲ್ಲಿ ಕೆಲವು ಕಾಮಗಾರಿ ಗಳನ್ನು ನಿರ್ವಹಿಸಿದ್ದಾರೆ. ಉಳಿದವುಗಳನ್ನು ನಿರ್ವಹಿಸದೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಶಾಮೀಲಾಗಿ ಬೋಗಸ್ ಬಿಲ್ ಮಾಡಿಕೊಂಡಿರುತ್ತಾರೆಂದು ಲೋಕಾಯುಕ್ತ ಮುಖ್ಯ ಅಭಿಯಂತರರಿಗೆ ನೀಡಿದ್ದ ದೂರಿನಲ್ಲಿ ಆರೋಪಿಸಲಾಗಿದೆ.

ಇಂದು ವಾರ್ಡ್ ನಂ.10, 19, 20 ಮತ್ತು 29ರಲ್ಲಿ ಕಾಮ ಗಾರಿಗಳನ್ನು ಪರಿಶೀಲಿಸ ಲಾಯಿತು. ಈ ಕಾಮಗಾರಿಗಳ ಫೈಲ್‍ನಲ್ಲಿರುವ ಫೋಟೋ ಗಳಲ್ಲಿ ನಗರಸಭೆ ಸೆಕ್ಷನ್ ಆಫೀ ಸರ್, ವರ್ಕ್ ಇನ್‌ಸ್ಪೆಕ್ಟರ್, ಥರ್ಡ್ ಪಾರ್ಟಿ ಮತ್ತು ಗುತ್ತಿಗೆ ದಾರರಿರುವುದಿಲ್ಲ ಹಾಗೂ ಫೋಟೋಗಳು ಕಾಮಗಾರಿಗೆ ಹೊಂದಾಣಿಕೆಯಾಗಿಲ್ಲ ಎಂದು ತಿಳಿದು ಬಂದಿದೆ. 

ಈ ಎಲ್ಲಾ ಕಾಮಗಾರಿಗಳು ಕೋವಿಡ್ ಅವಧಿಯಲ್ಲಿ ನಡೆದಿವೆ, ಬುಧವಾರವೂ ಉಳಿದ ಕಾಮಗಾರಿಗಳ ಪರಿಶೀಲನೆ ನಡೆಯಲಿದೆ ಎಂದು ತಿಳಿದು ಬಂದಿದೆ.

ನಗರಸಭೆ ಎಇಇ ತಿಪ್ಪೇಸ್ವಾಮಿ, ನಿವೃತ್ತ ಎಇಇ ಎಸ್.ಎಸ್.ಬಿರಾದಾರ್, ನಿವೃತ್ತ ಎಇ ನೌಷಾದ್ ಎಚ್.ಟಿ., ಈ ಹಿಂದೆ ಎಇ ಆಗಿ ಸೇವೆ ಸಲ್ಲಿಸಿದ್ದ ಮಂಜುನಾಥ, ಗುತ್ತಿಗೆದಾರ ಎಚ್.ಎಸ್.ಸುಭಾಷ್ ಪರಿಶೀಲನೆ ಸಮಯದಲ್ಲಿ ಹಾಜರಿದ್ದರು.

error: Content is protected !!