ಗ್ರಾಮೀಣ ಮಹಿಳೆಯರಿಗೆ ಹೊಲಿಗೆ ತರಬೇತಿಗೆ ಅರ್ಜಿ ಆಹ್ವಾನ

ದಾವಣಗೆರೆ, ಜ.23-  ತೋಳಹುಣಸೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಹಳೇ ತೋಳಹುಣಸೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಗ್ರಾಮೀಣ ಮಟ್ಟದ ಮಹಿಳೆಯರಿಗಾಗಿ  30 ದಿನಗಳ ಕಾಲ ಊಟ ಮತ್ತು ವಸತಿಯೊಂದಿಗೆ ಹೊಲಿಗೆ ತರಬೇತಿ ನೀಡಲಾಗುವುದು. ವಿವರಕ್ಕೆ ಸಂಪರ್ಕಿಸಿ : 7975139332, 7019980484, 9964111314,9538395817,9481977076.

error: Content is protected !!