ಮರುಳಸಿದ್ದೇಶ್ವರ ಪ್ರೌಢಶಾಲೆಯಲ್ಲಿ ತಾ|| ಕಸಾಪ ದತ್ತಿ ಉಪನ್ಯಾಸ

ಮರುಳಸಿದ್ದೇಶ್ವರ ಪ್ರೌಢಶಾಲೆಯಲ್ಲಿ ತಾ|| ಕಸಾಪ ದತ್ತಿ ಉಪನ್ಯಾಸ

ಆನಗೋಡು ಜ. 23 –  ಸ್ವಾಮಿ ವಿವೇಕಾನಂದರ ಆಶಯದಂತೆ ಪ್ರತಿಯೊಬ್ಬ ವಿದ್ಯಾರ್ಥಿಯು ಸಿಡಿಲಮರಿಯಾಗಬೇಕು ಎಂದು ಕೊಡಗನೂರು ಪ.ಪೂ. ಕಾಲೇಜಿನ ಇತಿಹಾಸ ಉಪನ್ಯಾಸಕ ಮತ್ತು ಕವಿ ಎಸ್.ಆರ್. ನಯನಜ ಮೂರ್ತಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಶ್ರೀ ಮರುಳಸಿದ್ದೇಶ್ವರ ಪ್ರೌಢಶಾಲೆಯಲ್ಲಿ ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷ ತ್ತು, ದಾವಣಗೆರೆ ಹಿರಿಯ ನಾಗರಿಕರ ಸಹಾ ಯವಾಣಿ  ಮತ್ತು  ಜಿ. ಚನ್ನಪ್ಪ ಪದವಿ ಪೂರ್ವ ಕಾಲೇಜಗಳ ಸಹಯೋಗದಲ್ಲಿ ಏರ್ಪಡಿಸಿದ್ದ ದತ್ತಿ ಉಪ ನ್ಯಾಸ ಕಾರ್ಯಕ್ರಮದಲ್ಲಿ, ನಯನಜಮೂರ್ತಿಯವರು ವಿದ್ಯಾರ್ಥಿಗಳಿಗೆ ಸ್ವಾಮಿ ವಿವೇಕಾನಂದರ ಸಂದೇಶ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. 

ಕಾರ್ಯಕ್ರಮ ಉದ್ಘಾಟನೆ ಮಾಡಿದ ಜಿ. ಚನ್ನಪ್ಪ ಪ.ಪೂ. ಕಾಲೇಜಿನ ಪ್ರಾಚಾರ್ಯರಾದ ಡಾ. ಕಾವೇರಿ ಗೌಡರು ಮಾತನಾಡಿ, ಸ್ವಾಮಿ ವಿವೇಕಾನಂದರು ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯ ಮೌಲ್ಯವನ್ನು ಸಾರಿದ ಧೀಮಂತ ಸಂತರಾಗಿದ್ದರು ಎಂದು ಬಣ್ಣಿಸಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಎಚ್. ರವಿ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯ ಯುವ ಜನಕ್ಕೆ  ಆದರ್ಶ ವ್ಯಕ್ತಿಯಾಗಿದ್ದರು. ಅವರು ಸಾರಿದ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶ್ವರಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದತ್ತಿ ದಾನಿಗಳಾದ ತರಳಬಾಳು ವಿದ್ಯಾಸಂಸ್ಥೆಯ ನಿವೃತ್ತ ಮುಖ್ಯೋಪಾಧ್ಯಾಯ ಜಿ. ಆರ್. ಷಣ್ಮುಖಪ್ಪ, ಬಾಡ ಗ್ರಾಮ ಪಂಚಾಯತಿಯ ಮಾಜಿ ಪ್ರಧಾನ ಪ್ರಕಾಶ್, ಬಾಡ ವ್ಯವಸಾಯ ಸೇವಾ ಸಹಕಾರ ಸಂಘದ ಶಿವಮೂರ್ತಿ, ಹಿರಿಯ ನಾಗರಿಕರ ಸಹಾಯ ವಾಣಿಯ ಸಂಯೋಜಕ ನವೀನಕುಮಾರ್, ವಿಜಯಕುಮಾರ್, ಮಮತಾ, ಸುವರ್ಣ, ಪುಟ್ಟಣ್ಣ ಮುಂತಾದವರು ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳಾದ ಕು. ಸಿಂಚನ ಮತ್ತು ಸಂಗಡಿಗರು ಪ್ರಾರ್ಥನೆ ಹಾಡಿದರು. ಶಿಕ್ಷಕ ವೇದ ಮೂರ್ತಿ ಸ್ವಾಗತಿಸಿದರು. ಡಾ. ವಿಜಯ ಕುಮಾರ್ ವಂದನೆ ಸಲ್ಲಿಸಿದರು. ನಾಗರಾಜ ಸಿರಿಗೆರೆ ಕಾರ್ಯಕ್ರಮ ನಿರೂಪಿಸಿದರು.

error: Content is protected !!