ಚಿತ್ರದುರ್ಗದ ಅಹಿಂದ ಜಾಗೃತಿ ಸಮಾವೇಶಕ್ಕೆ ಹತ್ತು ಲಕ್ಷ ಜನ

ಚಿತ್ರದುರ್ಗದ ಅಹಿಂದ ಜಾಗೃತಿ ಸಮಾವೇಶಕ್ಕೆ ಹತ್ತು ಲಕ್ಷ ಜನ

ಹರಪನಹಳ್ಳಿ ಸುದ್ದಿಗೋಷ್ಠಿಯಲ್ಲಿ ಹೊದಿಗೆರೆ ರಮೇಶ್ ಹೇಳಿಕೆ

ಹರಪನಹಳ್ಳಿ,ಜ.23- ಶೋಷಿತ ಹಾಗೂ ತಳಸಮುದಾಯಗಳಲ್ಲಿ ರಾಜಕೀಯ, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ  ಜಾಗೃತಿ ಮೂಡಿಸುವ ಉದ್ದೇಶ ದಿಂದ ಚಿತ್ರದುರ್ಗದಲ್ಲಿ  ಶೋಷಿತ ಸಮುದಾಯಗಳ ಐತಿಹಾಸಿಕ ಜಾಗೃತಿ ಸಮಾವೇಶ   ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡ ಹೊದಿಗೆರೆ‌ ರಮೇಶ್ ಹೇಳಿದರು.

ಪಟ್ಟಣದ   ಸಮತ ರೆಸಾರ್ಟ್‌ನಲ್ಲಿ    ಸುದ್ದಿಗೋಷ್ಠಿ ಉದ್ದೇಶಿಸಿ  ಮಾತನಾಡಿದ ಅವರು, ಹಣ ಹೆಂಡ ಕೊಟ್ಟು ಮತ ಹಾಕಿಸಿಕೊಳ್ಳುವ ಕಾಲ ದೂರವಾಗಬೇಕು.  ನಮ್ಮಲ್ಲಿ ತಾಳ್ಮೆ, ಸಹನೆ ಬರಬೇಕು  ಹರಪನಹಳ್ಳಿಯಲ್ಲಿ ಶೋಷಿತರು ಶಾಸಕರಾಗಬೇಕು ಎಂದರು.

ನ್ಯಾಯಮೂರ್ತಿ ಎಚ್. ಕಾಂತರಾಜ್ ಆಯೋಗ ಸಲ್ಲಿಸಿರುವ ಜಾತಿಗಣತಿ ವರದಿಯನ್ನು ಈ ಕೂಡಲೇ ಯಥಾವತ್ತಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸುವ ಹಿನ್ನೆಲೆಯಲ್ಲಿ ಮಧ್ಯೆ ಕರ್ನಾಟಕ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ನಗರದ ಹೊರವಲಯದಲ್ಲಿ ಇದೇ ಜನವರಿ 28ರಂದು ಶೋಷಿತರ ಬೃಹತ್ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಿಂದುಳಿದ  ನಾಯಕರು ಭಾಗವಹಿಸುವ  ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ 10ಲಕ್ಷ ಜನ ಸಂಖ್ಯೆ ಸೇರುವ  ನಿರೀಕ್ಷೆ ಇದೆ  ಎಂದರು.

ಮುಖಂಡ ಕೋಡಿಹಳ್ಳಿ ಭೀಮಪ್ಪ, ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ ಹಾಲೇಶ ಮಾತನಾಡಿ, ತಳ ಸಮುದಾಯಗಳು ಎಲ್ಲ ರಂಗದಲ್ಲಿ ಎಷ್ಟು ಅಭಿವೃದ್ಧಿ ಸಾಧಿಸಿವೆ ಎನ್ನುವ ಉದ್ದೇಶದಿಂದ  ಕಾಂತರಾಜ್ ವರದಿ ಸಿದ್ದಮಾಡಲಾಗಿದ್ದು, ವರದಿ ಬಿಡುಗಡೆ ಯಾಗುವ ಮೂದಲೇ ಕಾಂತರಾಜ್ ವರದಿ ಸರಿಯಿಲ್ಲ ಎನ್ನುವುದು ಯಾವ ನ್ಯಾಯ ಎಂದರು.

ಶೋಷಿತ ಸಮುದಾಯಗಳ ಜಿಲ್ಲಾ ಸಂಚಾಲಕ  ವೀರೇಶ ನಾಯಕ, ಜಿಲ್ಲಾ ಮುಖಂಡ ಶಿವಕುಮಾರ ಒಡೆಯರ್,   ಕುರುಬ ಸಮಾಜದ ಅಧ್ಯಕ್ಷ ಬಿ.ಗೋಣಿ ಬಸಪ್ಪ.  ಜಿಲ್ಲಾ ಪಂಚಾಯತಿ ಮಾಜಿ‌ ಸದಸ್ಯ ಹೆಚ್.ಬಿ. ಪರುಶುರಾಮಪ್ಪ, ಆಲದಹಳ್ಳಿ ಷಣ್ಮುಖಪ್ಪ, ಮೋತಿ ನಾಯ್ಕ, ಇಸ್ಮಾಯಿಲ್ ಎಲಿಗಾರ್ ಮಾತನಾಡಿದರು.

ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ, ವಾಲ್ಮೀಕಿ ನಾಯಕ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಮುಖಂಡರಾದ ಜಂಬಣ್ಣ, ಬಿ.ವಾಗೀಶ, ಆಲಮರಸಿಕೇರಿ ಜಗದೀಶ, ಪಿ.ಅರುಣ ಕುಮಾರ, ಜಟ್ಟೆಪ್ಪರ ಮಂಜು ನಾಥ, ಆಲಮರಸಿಕೇರಿ ಪರುಶುರಾಮ, ಕಡಕೋಳ ನೂರುದ್ದಿನ್, ಇರ್ಪಾನ್ ಮುದಗಲ್, ಶಂಕರನಹಳ್ಳಿ ಹನುಮಂತಪ್ಪ, ಗುಡಿ ನಾಗರಾಜ, ಶಿವಾಜಿನಾಯ್ಕ,   ಕೊರಚ ಕೊರಮ ಸಮಾಜದ  ಕೆಂಚಪ್ಪ, ಎಚ್. ವಸಂತಪ್ಪ,  ಮೈದೂರು ರಾಮಣ್ಣ, ಮಂಜನಾಯ್ಕ,  ಬಸವರಾಜ ಹುಲಿಯಪ್ಪ ನವರ್,  ಕೆ. ತಿರುಮಲ, ಡಿ.ಹನುಮಂತಪ್ಪ ಸೇರಿದಂತೆ ಇತರರು  ಇದ್ದರು.

error: Content is protected !!