ಹರಪನಹಳ್ಳಿಯಲ್ಲಿ ಅದ್ದೂರಿ ಅಯ್ಯಪ್ಪ ಸ್ವಾಮಿ ರಥೋತ್ಸವ

ಹರಪನಹಳ್ಳಿಯಲ್ಲಿ ಅದ್ದೂರಿ ಅಯ್ಯಪ್ಪ ಸ್ವಾಮಿ ರಥೋತ್ಸವ

ಹರಪನಹಳ್ಳಿ, ಜ.19- ಅಪಾರ ಭಕ್ತ ಸಮೂಹದ ನಡುವೆ ಪಟ್ಟಣದ ಮೇಗಳಪೇಟೆಯ ಸಮೀಪದಲ್ಲಿರುವ ಭಾರತಿ ನಗರದ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಮೂರನೇ ವರ್ಷದ ರಥೋತ್ಸವ, 15ನೇ ವರ್ಷದ ದೀಪಾರಾಧನೆ, ಮಹಾ ಮಂಗಳಾರತಿ ಹಾಗೂ ಧರ್ಮಸಭೆ ಜರುಗಿತು.

ಪಟ್ಟಣದ ಮೇಗಳಪೇಟೆ ನಿವಾಸಿ ಸುಂಕದಲ್ಲು ಕೊಟ್ರೇಶ್ ಅವರು ಒಂದು ಸಾವಿರದ ಒಂದು ರೂಪಾಯಿಗೆ ಅಯ್ಯಪ್ಪ ಸ್ವಾಮಿಯ ರುದ್ರಾಕ್ಷಿ ಮಾಲೆಯನ್ನು ಮತ್ತು ಭಾರತಿ ನಗರದ ನಿವಾಸಿ ಬಿ.ವೀರೇಶ್ ಆಚಾರಿ ಅವರು ಐದು ಸಾವಿರದ ಒಂದು ನೂರಾ ಒಂದು ರೂಪಾಯಿಗೆ ಪಟಾಕ್ಷಿಯನ್ನು ತಮ್ಮದಾಗಿಸಿಕೊಂಡರು.  

ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮಿಜಿಗಳು, ಹಡಗಲಿ ಗವಿಸಿದ್ದೇಶ್ವರ ಶಾಖಾಮಠದ ಡಾ.ಹಿರಿಶಾಂತ ವೀರಸ್ವಾಮಿಗಳು, ನೀಲಗುಂದ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಶ್ರೀಗಳು, ಇಟ್ಟಿಗಿ ಚಿಕ್ಕಮ್ಯಾಗೇರಿಯ ಹಿರೇಮಠದ ಗುರುಶಾಂತವೀರ ಶೀವಾಚಾರ್ಯ ಶ್ರೀಗಳು, ಹಿರೇಮಲ್ಲನಕೆರೆ ವಿರಕ್ತಮಠದ ಅಭಿನವ ಚನ್ನಬಸವ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. 

ಅಯ್ಯಪ್ಪಸ್ವಾಮಿ ಪ್ರಶಸ್ತಿಯನ್ನು ಪಿಎಲ್‍ಡಿ ಬ್ಯಾಕ್ ನಿರ್ದೇಶಕ ಪಿ.ಬಿ.ಗೌಡ ಅವರಿಗೆ ನೀಡಿ ಗೌರವಿಸಲಾಯಿತು. ಕಿರಾಣಿ ವರ್ತಕರು ಹಾಗೂ ಸಂಸ್ಕಾರ ಭಾರತಿ ಅಧ್ಯಕ್ಷ ಮಹಾವೀರ ಬಂಡಾರಿ ಅವರು 14ನೇ ವರ್ಷದ ಪ್ರಸಾದ ಸೇವೆ ಮಾಡಿದರು.

ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಪರಸಭೆ ಸದಸ್ಯ ಗೊಂಗಡಿ ನಾಗರಾಜ್, ಪುರಸಭೆ ಮಾಜಿ ಅಧ್ಯಕ್ಷ ಹಾಗೂ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಎಂ.ರಾಜಶೇಖರ್, ಪುರಸಭೆ ಮಾಜಿ ಸದಸ್ಯ ಬಂಗ್ಲಿ ಸೋಮಶೇಖರ್, ನಿವೃತ್ತ ಶಿಕ್ಷಕಿ ದಾನ ಚಿಂತಾಮಣಿ, ಮದರ್ ತೆರೆಸಾ ಪ್ರಶಸ್ತಿ ಪುರಸ್ಕತೆ ಹೆಚ್.ಎಂ.ಲಲಿತಮ್ಮ ಸೋಮಲಿಂಗಯ್ಯ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಪಾಧ್ಯಕ್ಷ ಕೆ.ಆರ್.ಗಿರೀಶ್, ಕಾರ್ಯದರ್ಶಿ ಕೊಟ್ಗಿ ಈಶಣ್ಣ, ಖಜಾಂಚಿ ಕೌಟಿ ಮಂಜುನಾಥ, ಆಟೋ ಕೌಟಿ ಮಂಜುನಾಥ, ತರಕಾರಿ ವೀರಣ್ಣ, ಪಶು ವೈದ್ಯ ನಾಗರಾಜ್, ದಾವಣಗೆರೆ ನಾಗರಾಜ್, ಶಿಕ್ಷಕರಾದ ಎ.ಎಂ.ಗುಪ್ರಸಾದ್, ಬಣಕಾರ್ ರಾಜಶೇಖರ್, ಪ್ರವೀಣ, ಮೃತ್ಯೋಂಜಯ, ಮಟ್ಟೇರ ಪ್ರಕಾಶ್, ಸತೀಶ್, ಹುಚ್ಚಪ್ಪ, ಪೈಲ್ವನ್ ಸಾದರ್ ಶರತ್‍ಕುಮಾರ್, ಗುರುಸ್ವಾಮಿ ಆರ್.ಬಿ.ಮಂಜುನಾಥ, ವೀರಾಗಾಸೆ ಕಲಾವಿದ ಜಿ.ಮಲ್ಲಿಕಾರ್ಜುನ, ಕಾಶಿಮಠದ ಶಾಸ್ತ್ರಿ ಬಸಯ್ಯ ಇದ್ದರು. 

error: Content is protected !!