ಭಾನುವಳ್ಳಿ : ಹೋರಾಟ ತೀವ್ರಗೊಳಿಸಲು ತೀರ್ಮಾನ

ಭಾನುವಳ್ಳಿ : ಹೋರಾಟ ತೀವ್ರಗೊಳಿಸಲು ತೀರ್ಮಾನ

ಮಲೇಬೆನ್ನೂರು, ಜ.19- ಭಾನುವಳ್ಳಿ ಗ್ರಾಮದ ರಾಜವೀರ ಮದಕರಿ ನಾಯಕ ಮಹಾದ್ವಾರದ ಪಕ್ಕದಲ್ಲಿ ಅನಧಿಕೃತವಾಗಿ ಪ್ರತಿಷ್ಠಾಪಿಸಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ತೆರವುಗೊಳಿಸುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜದವರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಶುಕ್ರವಾರ 11ನೇ ದಿನಕ್ಕೆ ಕಾಲಿಟ್ಟಿದೆ. 

ಜಿಲ್ಲಾಧಿಕಾರಿಗಳು ಶೀಘ್ರ ಪ್ರತಿಮೆ ತೆರವುಗೊಳಿಸುವುದಾಗಿ ಹೇಳಿದ್ದರು. ಆದರೆ, ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಮ್ಮ ಮುಂದಿನ ಹೋರಾಟವನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ತೀವ್ರಗೊಳಿಸುವುದಾಗಿ ಮುಖಂಡರು ತಿಳಿಸಿದರು.

ಗ್ರಾ.ಪಂ ಸದಸ್ಯೆ ಶ್ರೀಮತಿ ಗಿರಿಜಮ್ಮ, ರತ್ನಮ್ಮ, ಮಲ್ಲಿಗಮ್ಮ, ಗಂಗಮ್ಮ, ಹೇಮಾಶ್ರೀ, ಶಾಂತಮ್ಮ, ಕಲಾವತಿ, ಶಿವಕ್ಕ, ಸರೋಜಮ್ಮ, ವಾಣಿ, ಶೀಲಾ, ಜಯಮ್ಮ, ಬಾತಿ ಜಯಮ್ಮ, ದೊಡ್ಡಮನಿ ಪಾರ್ವತಿ, ನಾಗಮ್ಮ, ಮುಖಂಡರಾದ ಟಿ.ಪುಟ್ಟಪ್ಪ. ಕಾಮ್ಲಾಪುರ ಶಿವಪ್ಪ, ನಾರಾಯಣಪ್ಪ, ಮಾಂತೇಶ್ ಸೇರಿದಂತೆ ಇನ್ನು ಅನೇಕರು ಭಾಗವಹಿಸಿದ್ದರು.

error: Content is protected !!