ಸರ್ಕಾರಿ ಶಾಲೆಗಳ ಉಳಿವಿಗೆ ಖಾಸಗಿ ಸಂಸ್ಥೆಗಳು ಅವಶ್ಯಕ

ಸರ್ಕಾರಿ ಶಾಲೆಗಳ ಉಳಿವಿಗೆ ಖಾಸಗಿ ಸಂಸ್ಥೆಗಳು ಅವಶ್ಯಕ

ಹರಿಹರದ ಬಿಇಓ ಹನುಮಂತಪ್ಪ

ಮಲೇಬೆನ್ನೂರು, ಜ. 19 – ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಧಾವಿಸಿದರೆ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗುವುದರ ಜೊತೆಗೆ ಸರ್ಕಾರಿ ಶಾಲೆಗಳ ಉಳಿವಿಗೆ ಕಾರಣ ವಾಗುತ್ತದೆ ಎಂದು ಬಿಇಓ ಹನುಮಂತಪ್ಪ ಹೇಳಿದರು. 

ಯಲವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯುರೋಪಿನ್ಸ್ ಕಂಪನಿ ಆಯೋಜಿಸಿದ್ದ ವಿವಿಧ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. 

ದಾವಣಗೆರೆ ರೋಟರಿ ಕ್ಲಬ್‌ನ ಸಾರ್ವಜನಿಕ ಸಂಪರ್ಕ ನಿರ್ದೇಶಕ ಆರ್.ಟಿ. ಮೃತ್ಯುಂಜಯ ಮಾತನಾಡಿ ಯುರೋಪಿನ್ಸ್ ಕಂಪನಿ ಅವರು 7 ಲಕ್ಷ ರೂ. ವೆಚ್ಚದಲ್ಲಿ ಯಲವಟ್ಟಿ ಮತ್ತು ಧೂಳೆ ಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿನ 312 ಮಕ್ಕಳಿಗೆ ಸ್ಕೂಲ್ ಬ್ಯಾಗ್, ನೀರಿನ ಬಾಟಲ್‌ಗಳನ್ನು ವಿತರಿಸಿದ್ದು
ಜೊತೆಗೆ ಕಲಿಕೆಗೆ ಪೂರಕವಾದ ಹಸಿರು ಬೋರ್ಡ್‌ಗಳನ್ನು ನೀಡಿರುವುದು ತುಂಬಾ ಸಂತೋಷದ ವಿಷಯ ಎಂದರು. 

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಹೆಗಡೆ ಮಾತನಾಡಿ, ಯುರೋಪಿನ್ಸ್ ಕಂಪನಿಯ ಸಿಎಸ್ಆರ್ ಮುಖ್ಯಸ್ಥರಾದ ರೇಖಾ ಮಂಡಲ್ ಹಾಗೂ ಶಿವಯೋಗಿ ಹಟ್ಟಿ ರೋಟರಿ ಸಂಸ್ಥೆಯ ಮೂಲಕ ಮಕ್ಕಳಿಗೆ ಸಹಾಯ ಹಸ್ತ ಚಾಚಿರುವುದು ಬಡ ಮಕ್ಕಳ ಮೇಲೆ ಇರುವ ಪ್ರೀತಿ, ಕಾಳಜಿ ತೋರುತ್ತದೆ.  ಯಲವಟ್ಟಿ ಮತ್ತು ಧೂಳೆಹೊಳೆ ಶಾಲೆಗಳ ಮನವಿಗೆ ಸ್ಪಂದಿಸಿದ ಕಂಪನಿಯ ಮುಖ್ಯಸ್ಥರಿಗೆ ಹೆಗಡೆ ಧನ್ಯವಾದ ತಿಳಿಸಿದರು. 

ದಾವಣಗೆರೆ ಕ್ಲಬ್‌ನ ಅಧ್ಯಕ್ಷರಾದ ಕುಸುಮಾ ವಿಜಯಾನಂದ್,   ಕಾರ್ಯದರ್ಶಿ ಸುನಿತಾ ಮೃತ್ಯುಂಜಯ, ಅಂದನೂರು ಆನಂದ ಕುಮಾರ್, ಜಿ. ಎಂ. ಲೋಹಿತಾಶ್ವ, ಕ್ಲಸ್ಟರ್‌ನ ಸಿ.ಆರ್.ಪಿ ಕರಡಿ ಪ್ರಕಾಶ್, ತಾ. ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಕೆ.ಬೀರಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪ್ಯಾಟಿ, ಶಿಕ್ಷಕರ ಸಂಘದ ಖಜಾಂಚಿ ವಿನೋದಮ್ಮ, ಸದಸ್ಯ ಮಂಜಪ್ಪ ಬಿದರಿ, ಶಾಲೆಯ ಮುಖ್ಯ ಶಿಕ್ಷಕ ರವೀಂದ್ರ ಚಾರಿ, ಶಿಕ್ಷಕರುಗಳಾದ ರಾಘವೇಂದ್ರ, ಪರಶುರಾಮ, ವಿಜಯ್ ಕುಮಾರ್, ನಾಗ ಮಂಜುಳಾ ಜೋಶಿ, ಅನುರಾಧಗೌಡ  ಹಾಗೂ ಇತರರು ಈ ವೇಳೆ ಹಾಜರಿದ್ದರು.

error: Content is protected !!