ಹರಿಹರದಲ್ಲಿ ಲಾರಿ ಚಾಲಕರ ಧರಣಿ, ಸತ್ಯಾಗ್ರಹ

ಹರಿಹರದಲ್ಲಿ ಲಾರಿ ಚಾಲಕರ ಧರಣಿ, ಸತ್ಯಾಗ್ರಹ

ಹರಿಹರ, ಜ.18- ತುಂಗಭದ್ರಾ ಲಾರಿ ಚಾಲಕರ ಮತ್ತು ಕ್ಲೀನರ್ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ, ಲಾರಿ ಸಾಗಾಟ ಸ್ಥಗಿತಗೊಳಿಸಿ ಧರಣಿ ಸತ್ಯಾಗ್ರಹ ನಡೆಸಿದರು.

ಈ ವೇಳೆ ಲಾರಿ ಚಾಲಕರ ಸಂಘದ ಅಧ್ಯಕ್ಷ ಯುಸೂಫ್ ಮಾತನಾಡಿ, ಮೋಟಾರು ಚಾಲಕ, ಮಾಲೀಕರಿಗೆ ಹೊಸದಾಗಿ ತಂದಿರುವ ಕಾನೂನು ಪ್ರಕಾರ ಅಪಘಾತದಲ್ಲಿ ಮೃತರಾದರೆ, ಚಾಲಕನಿಗೆ 5 ರಿಂದ 10 ವರ್ಷಗಳ ಸೆರೆವಾಸ ಮತ್ತು 7 ಲಕ್ಷ ದಂಡ ತೆರಬೇಕಾಗುತ್ತದೆ. ಆದರೆ ಹಳೆಯ 304 ಎ ಪ್ರಕಾರ ಮೃತಪಟ್ಟರೆ, ಎರಡು ವರ್ಷಗಳವರೆಗೆ ಮಾತ್ರ ಸೆರೆವಾಸ ಇತ್ತು. ಹಾಗಾಗಿ ಹಳೆಯ ಕಾನೂನು ಜಾರಿಗೆ ತರಬೇಕು. ಲಾರಿ ಮೇಲೆ ದೇಶದ 70 ರಷ್ಟು ಲಾರಿ ಚಾಲಕರ ಜೀವನವನ್ನು ಹೊಂದಿದ್ದು, ಈ ಹೊಸ ಕಾನೂನು ಜಾರಿಗೆ ತಂದು ಚಾಲಕರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಒಂದು ವೇಳೆ ಕಾನೂನು ಹಿಂಪಡೆಯದೇ ಹೋದರೆ, ದಿ. 17 ರಂದು ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಲಾರಿ ಮಾಲೀಕರ ಸಂಘದವರು ಕರೆದಿರುವ ಮುಷ್ಕರಕ್ಕೆ ತುಂಗಭದ್ರಾ ಲಾರಿ ಚಾಲಕರು ಮತ್ತು ಕ್ಲೀನರ್ ಶ್ರೇಯಾಭಿವೃದ್ಧಿ ಸಂಘ ಕೈ ಜೋಡಿಸಿ ಮುಷ್ಕರಕ್ಕೆ ಬೆಂಬಲ ನೀಡಿ, ಲಾರಿಗಳ ಸಂಚಾರ ಸ್ಥಗಿತಗೊಳಿಸಲಿದೆ. ಗೂಡ್ಸ್ ಲಾರಿ ಸಂಘ, ಆಟೋ ಚಾಲಕರ ಮತ್ತು ಮಾಲೀಕರ ಸಂಘ, ಫುಟ್‌ಪಾತ್ ಹಣ್ಣು, ತರಕಾರಿ, ಹೂವು, ಎಗ್‌ರೈಸ್  ವ್ಯಾಪಾರಿ ಸಂಘ, ಕಾರು ಟ್ಯಾಕ್ಸಿ ಮಾಲೀಕರ ಸಂಘ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಎಂದು ಹೇಳಿದರು. 

ಕಾರ್ಮಿಕ ಮುಖಂಡ ಹೆಚ್.ಕೆ. ಕೊಟ್ರಪ್ಪ ಮಾತನಾಡಿ, ಲಾರಿ ಚಾಲಕರು ಮಾಡುತ್ತಿರುವ ಹೋರಾಟ ನ್ಯಾಯಬದ್ಧ ಹೋರಾಟವಾಗಿದೆ. ಸರ್ಕಾರ ಈ ಕೂಡಲೇ ಅವರ ಹೋರಾಟಕ್ಕೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾರ್ಯದರ್ಶಿ ಜಂಬಯ್ಯ, ಇಮ್ರಾನ್, ಜಪಾನ್ ರಫಿಕ್ ಸಾಬ್, ಹಿದಾಯತ್, ಸಲ್ಮಾನ್, ವಾಸು ಪಾಂಡು, ಅಬ್ದುಲ್ ಗಫೂರ್, ರಾಜು ಬಸಪ್ಪ, ಜಂಬಯ್ಯ, ಖಲೀಲ್ ಸಾಬ್, ಜಿಯಾವುಲ್ಲಾ,ಇಮ್ರಾನ್ ಕೆ.ಅಕ್ಬರ್, ಮೆಹಬೂಬ್ ಸಾಬ್, ಶರೀಫ್ ಸಾಬ್, ಫಕೃದ್ದೀನ್, ಚಿಟ್ಟಿ ಗಫೂರ್ ಸಾಬ್,  ಹರೀಶ್ ಇತರರು ಹಾಜರಿದ್ದರು. 

error: Content is protected !!