ಕುಣೆಬೆಳಕೆರೆ : ವೃದ್ಧೆಗೆ ತತ್‌ಕ್ಷಣ ವಸತಿ ವ್ಯವಸ್ಥೆಗೆ ತಹಶೀಲ್ದಾರ್ ಸೂಚನೆ

ಕುಣೆಬೆಳಕೆರೆ : ವೃದ್ಧೆಗೆ ತತ್‌ಕ್ಷಣ ವಸತಿ ವ್ಯವಸ್ಥೆಗೆ ತಹಶೀಲ್ದಾರ್ ಸೂಚನೆ

ಕುಣೆಬೆಳಕೆರೆ : ವೃದ್ಧೆಗೆ ತತ್‌ಕ್ಷಣ ವಸತಿ ವ್ಯವಸ್ಥೆಗೆ ತಹಶೀಲ್ದಾರ್ ಸೂಚನೆ - Janathavaniಮಲೇಬೆನ್ನೂರು, ಜ.18- ಕುಣೆಬೆಳಕೆರೆ ಗ್ರಾಮದಲ್ಲಿ 75 ವರ್ಷದ ವೃದ್ಧೆ ಶ್ರೀಮತಿ ಗಿರಿಜಮ್ಮ ಶಿವಪ್ಪ ಅವರಿಗೆ ತತ್‌ಕ್ಷಣ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ಗುರುಬಸವರಾಜ್ ಅವರು ಪಿಡಿಓ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು.

ಕಳೆದ ವಾರವಷ್ಟೇ ಮಲೇಬೆನ್ನೂರು ಉಪತಹಶೀಲ್ದಾರ್ ಆರ್.ರವಿ ಅವರು ಗ್ರಾ.ಪಂ.ನವರ ಸಹಕಾರದಿಂದ ಬಸ್ ನಿಲ್ದಾಣದಲ್ಲಿ ಆಶ್ರಮ ಪಡೆದಿದ್ದ ಈ ವೃದ್ಧೆಯನ್ನು ಅಂಬುಲೆನ್ಸ್ ಮೂಲಕ ಚಿಕಿತ್ಸೆಗಾಗಿ ಹರಿಹರ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದರು.

ಚಿಕಿತ್ಸೆ ನಂತರ ವೃದ್ಧೆಯನ್ನು ಹರಿಹರದಲ್ಲಿರುವ ಅನಾಥಾಶ್ರಮಕ್ಕೆ ಬೀಡಲಾಗಿತ್ತು. ಆದರೆ, ವೃದ್ಧೆ ಗಿರಿಜಮ್ಮ ಅವರು ನಾನು ಕುಣೆಬೆಳಕೆರೆಯಲ್ಲೇ ಇರುತ್ತೇನೆಂದು ಬಂದು ಪುನಃ ಬಸ್ ನಿಲ್ದಾಣದಲ್ಲೇ ತಂಗಿದ್ದರು.

ಈ ವಿಷಯ ತಿಳಿದ ತಹಶೀಲ್ದಾರ್ ಗುರುಬಸವರಾಜ್, ಉಪತಹಶೀಲ್ದಾರ್ ಆರ್.ರವಿ ಅವರು, ಗುರುವಾರ ಬೆಳೆಗ್ಗೆಯೇ ಗ್ರಾಮಕ್ಕೆ ಆಗಮಿಸಿ, ಗ್ರಾಮಸ್ಥರೊಂದಿಗೆ ಚರ್ಚಸಿ, ಕೂಡಲೇ ಈ ವೃದ್ಧೆಗೆ ಇಲ್ಲಿಯೇ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡುವಂತೆ ಮತ್ತು ಊಟ-ಉಪಚಾರದ ವ್ಯವಸ್ಥೆ ಮಾಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ವರ್ಷ ಪತಿ ಶಿವಪ್ಪ ಅವರ ನಿಧನರಾದ ನಂತರ ಗೌರಮ್ಮ ಅವರು ಒಬ್ಬಂಟಿಯಾಗಿದ್ದರಿಂದ ಉಪಚಾರ ಮಾಡುವವರಿಲ್ಲದೇ ನಿಶ್ಚಕ್ತಿಯಾಗಿದ್ದರು. ಅಲ್ಲದೇ ಚಪ್ಪೆಗೆ ಪೆಟ್ಟು ಬಿದ್ದು ನಡೆದಾಡುವುದಕ್ಕೂ ತೊಂದರೆಯಾಗಿತ್ತು. ಆಗ ಇವರನ್ನು ಹರಿಹರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈ ವೃದ್ಧೆಯ ಜೀವನ ನಿರ್ವಹಣೆಗಾಗಿ ಸರ್ಕಾರದಿಂದ ಮಾಸಾಶನ ಸೌಲಭ್ಯವನ್ನು ಈ ಹಿಂದೆಯೇ ಕಲ್ಪಿಸಿಕೊಡಲಾಗಿದೆ.

ಗ್ರಾ.ಪಂ. ಅಧ್ಯಕ್ಷ ನಾಗರಾಜ್, ಗ್ರಾ.ಪಂ. ಸದಸ್ಯರಾದ ಬಸವರಾಜಪ್ಪ, ಉಮೇಶ್, ಮಹಾದೇವಪ್ಪ, ಲತಾ, ಹಾಲಮ್ಮ, ಗ್ರಾಮದ ಕೆ.ವಿಜಯಪ್ಪ, ರಾಮಪ್ಪ, ಅಂಜಿನಪ್ಪ, ತಿಪ್ಪೇಶಪ್ಪ ಮತ್ತು ಗ್ರಾಮ ಲೆಕ್ಕಾಧಿಕಾರಿ ದೇವರಾಜ್, ಪಿಡಿಓ ತಿಪ್ಪೇಸ್ವಾಮಿ ಮತ್ತಿತರರು ತಹಶೀಲ್ದಾರ್ ಭೇಟಿ ವೇಳೆ ಹಾಜರಿದ್ದರು.

error: Content is protected !!