ಹೊಸ ಹುಂಡೈ ಕ್ರೆಟಾ ಭರ್ಜರಿ ಎಂಟ್ರಿ

ಹೊಸ ಹುಂಡೈ ಕ್ರೆಟಾ ಭರ್ಜರಿ ಎಂಟ್ರಿ

ದಾವಣಗೆರೆ, ಜ. 18-  ಹುಂಡೈ ಮೋಟಾರ್ ಇಂಡಿಯಾ ಕಂಪನಿಯ ಬಹು ನಿರೀಕ್ಷಿತ ಹೊಸ `ಹುಂಡೈ ಕ್ರೆಟಾ’ ಕಾರನ್ನು ನಗರದ ಕೆ.ಜೆ. ಹುಂಡೈ ಶೋ ರೂಂ ನಲ್ಲಿ ಆರ್.ಟಿ.ಓ. ಅಧಿಕಾರಿ ಸಿ.ಎಸ್. ಪ್ರಮುತೇಶ್ ಮಾರುಕಟ್ಟೆಗೆ ಪರಿಚಯಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಜೆ. ಹುಂಡೈ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಜೆ.ಅಫಕ್ ರಜ್ವಿ ಅವರು, ಹುಂಡೈ ಕ್ರೆಟಾ ಬ್ರ್ಯಾಂಡ್‍ನ ಯಶಸ್ಸು ಮತ್ತು ಪರಂಪರೆಯ ಮೇಲೆ ಹೊಸ ವಾಹನ ಉತ್ಪಾದಿಸಲಾಗಿದೆ ಎಂದು ತಿಳಿಸಿದರು.

ಹುಂಡೈ ಜನಪ್ರಿಯ ಎಸ್‍ಯುವಿಗಳಲ್ಲಿ ಕ್ರೆಟಾ ಕೂಡ ಒಂದು. 4,330 ಎಂಎಂ ಉದ್ದ, 1,790 ಎಂಎಂ ಅಗಲ ಮತ್ತು 1,635 ಎಂಎಂ ಎತ್ತರವನ್ನು ಹೊಸ ಕ್ರೆಟಾ ಹೊಂದಿದೆ. ಡ್ಯುಯಲ್-ಝೋನ್ ಕ್ಲೈಮೇಟ್ ಕಂಟ್ರೋಲ್, ವಿಹಂಗಮ ಸನ್‍ರೂಫ್, ವೆಂಟಿಲೇಟೆಡ್ ಸೀಟ್‍ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‍ಗಳು, ಮಲ್ಟಿ ಕಲರ್‍ಅಂಬಿಯೆಂಟ್ ಲೈಟಿಂಗ್, ಆಪಲ್ ಕಾರ್ ಪ್ಲೇ, ಅಂಡ್ರಾಯ್ಡ್ ಆಟೋ, ಕನೆಕ್ಟೆಡ್ ಕಾರ್‍ಟೆಕ್, ವಾಯ್ಸ್ ಕಮಾಂಡ್‍ಗಳು ಸೇರಿ ಸಾಕಷ್ಟು ವೈಶಿಷ್ಟ್ಯಗಳನ್ನು ಹೊಂದಿದೆ ಎಂದರು. 

ಸಮಾರಂಭದಲ್ಲಿ ಕೆ.ಜೆ.ಹುಂಡೈ ಸಂಸ್ಥೆಯ ಅಧ್ಯಕ್ಷರಾದ ಕೆ.ಜಾವೀದ್ ಸಾಬ್, ವ್ಯವಸ್ಥಾಪಕ ನಿರ್ದೇಶಕರಾದ ಕೆ.ಜೆ.ಅಫಕ್ ರಜ್ವಿ, ಸಂಸ್ಥೆಯ ನಿರ್ದೇಶಕರಾದ ಕೆ.ಜೆ.ಅಬ್ರಾರ್, ವ್ಯವಸ್ಥಾಪಕರಾದ ಶ್ರೀಮತಿ ಅಂಜಲಿ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!